ಸಿದ್ದಾಪುರ: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ ಬಡ ಹಾಗೂ ವಿಶೇಷಚೇತನರ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾನವೀಯತೆ ಮೆರೆದ ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ. ಯೂನಿಯನ್ ಜಾತಿ, ಬೇಧವಿಲ್ಲದೆ ಅರ್ಹ ಪಲಾನುಭವಿಗಳ ಮನೆಗಳಿಗೆ ತೆರಳಿ ಆಹಾರ ಸಾಮಗ್ರಿಗಳನ್ನು ವಿತರಿಸಿ ಧÉೈರ್ಯ ತುಂಬಿದರು.

ಈ ಸಂದರ್ಭ ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಉಪಾಧ್ಯಕ್ಷ ರಾಜನ್, ಪಂಚಾಯಿತಿ ಸದಸ್ಯರಾದ ಟಿ.ಸಿ. ನಾರಾಯಣ್, ಪ್ರಮುಖರಾದ ಕೆ.ಎಂ. ಮನೋಹರ್, ಗಿರೀಶ್ ಮಟ್ಟಂ, ಎಂ.ಎ. ಆನಂದ್, ಎಂ.ಕೆ. ಸಂದೀಪ್ ಇನ್ನಿತರರು ಹಾಜರಿದ್ದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಸೇವಾ ಭಾರತಿ ಸಂಸ್ಥೆ ವತಿಯಿಂದ ಡಾ. ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಡಿಕೇರಿ ರಾಜರಾಜೇಶ್ವರಿ ಆಸ್ಪತ್ರೆಯ ಡಾ. ನವೀನ್ ಅವರು ಊರುಗುತ್ತಿ ಗ್ರಾಮದಲ್ಲಿ 25 ಬಡಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು.

ಡಾ. ನವೀನ್, ಅಂಬೇಡ್ಕರ್ ಜಯಂತಿ ಆಚರಣೆಯ ಮಹತ್ವವನ್ನು ತಿಳಿಸಿದರು. ದ.ಸಂ.ಸ. ಜಿಲ್ಲಾ ಸಂಚಾಲಕ ದಿವಾಕರ್ ಮಾತನಾಡಿದರು. ಸಂಸ್ಥೆ ಜಿಲ್ಲಾ ಉಪಾಧ್ಯಕ್ಷ ಮಹೇಶ್, ಭರತ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಸುಂದರ್, ಸದಸ್ಯರಾದ ಕೇಶವ್ ಷಣ್ಮುಖಯ್ಯ, ಪ್ರಮುಖರಾದ ಭಗವಾನ್, ಶರತ್, ಚಂದ್ರ, ಮೋಕ್ಷಿತ್, ಯೋಗೇಶ್, ಹೂವಯ್ಯ, ಇಂದ್ರೇಶ್, ರಾಜು ಹಾಜರಿದ್ದರು.ಮಡಿಕೇರಿ: ನಗರದಲ್ಲಿ ಗಾಂಧಿ ಮಂಟಪದ ಎದುರಿಗೆ ಇರುವ ನರಾನೆ ಹೊಟೇಲ್ ಮತ್ತು ರೆಸಾರ್ಟ್ ಕಟ್ಟಡಗಳಲ್ಲಿರುವ ವಲಸೆ ಕಾರ್ಮಿಕರಿಗೆ ನ್ಯಾಯಾಧೀಶರ ಆದೇಶದಂತೆ ಸರಿಯಾದ ವ್ಯವಸ್ಥೆ ಮಾಡಿರುವ ಕುರಿತು ಪರಿಶೀಲಿಸಲಾಯಿತು, ನಂತರ ನಗರ ಸಭೆಯ ಹಿಂಭಾಗದಲ್ಲಿರುವ ದರ್ಶನ ಚಂಗಪ್ಪ ಅವರ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಸಿ.ಎಂ.ಸಿ.ಯಿಂದ 3 ಕಿಟ್, ಪೆನ್‍ಷನ್ ಲೇನ್‍ನಲ್ಲಿರುವ ಕಾರ್ಮಿಕರಿಗೆ 2 ಕಿಟ್, ಐ.ಟಿ.ಐ. ಜಂಕ್ಷನ್ ಹತ್ತಿರ 1 ಕಿಟ್, ಪುಟಾಣಿನಗರದ ಅಪ್ಪಚ್ಚು ಕಾಂಪೌಂಡ್‍ನಲ್ಲಿ 12 ಕಿಟ್‍ಗಳನ್ನು, ಮಾಸ್ಕ್ ಮತ್ತು ಹ್ಯಾಂಡ್‍ವಾಶ್ ಸೋಪ್ ಮತ್ತು ಸ್ಯಾನಿಟೈಜರ್‍ಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಕಾರ್ಮಿಕರ ಕುಂದುಕೊರತೆ ವಿಚಾರಿಸಿ ವಿತರಿಸಿದರು. ಈ ಸಂದರ್ಭ ತಹಶೀಲ್ದಾರ್ ಪಿ.ಎಸ್. ಮಹೇಶ್, ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ, ಪೌರಾಯುಕ್ತ ಎಂ.ಎಲ್. ರಮೇಶ್, ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಹೆಚ್.ಆರ್. ಮುರಳೀಧರ ಮತ್ತು ಇತರರು ಇದ್ದರು.*ಗೋಣಿಕೊಪ್ಪ: ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿ ನಿವಾಸಿಗಳಿಗೆ ಈರುಳ್ಳಿ, ಆಲೂಗಡ್ಡೆ ಸೇರಿದಂತೆ ವಿವಿಧ ತರಕಾರಿಗಳನ್ನು ಸಮಾಜ ಸೇವಕಿ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ಉಚಿತವಾಗಿ ವಿತರಿಸಿದರು.

ರಾಜ್ಯ ಮಾನವ ಹಕ್ಕು ಸಮಿತಿಯ ಉಪಾಧ್ಯಕ್ಷ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅವರ ಸಹಕಾರದೊಂದಿಗೆ ಹಾಡಿ ನಿವಾಸಿಗಳಿಗೆ ತರಕಾರಿ ನೀಡಿದರು.

ಎರಡನೆಯ ಹಂತದಲ್ಲಿ ದಿನಸಿ ಪದಾರ್ಥಗಳನ್ನು ನೀಡುವ ಚಿಂತನೆ ನಡೆಸಲಾಗಿದೆ. ಜಿಲ್ಲಾಡಳಿತ ಅನುಮತಿ ನೀಡಿದರೆ ವ್ಯವಸ್ಥಿತವಾಗಿ ಪದಾರ್ಥಗಳನ್ನು ಹಂಚಲಾಗುವುದು ಎಂದು ಕುಸುಮಾವತಿ ಹೇಳಿದರು. ಜಿಲ್ಲಾ ರೈತ ಮತ್ತು ಕಾರ್ಮಿಕ ಪ್ರಾಂತ್ಯ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಆದಿ ಮಂಜುಳಾ ಗಾಂಧಿನಗರದ ಮಂಜುನಾಥ್, ಬಾಳಲೆ ಗ್ರಾ.ಪಂ. ಸದಸ್ಯ ಸೂರ್ಯ ಉಪಸ್ಥಿತರಿದ್ದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದಲ್ಲಿರುವ ಹುಣಸೆಪಾರೆ ಹಾಡಿ ಜನರಿಗೆ ಪಡಿತರ ಕಿಟ್ ವಿತರಣೆ ಮಾಡಲಾಯಿತು. ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಸರಕಾರದ ವತಿಯಿಂದ ನೀಡಲಾಗುವ ಆಹಾರ ವಸ್ತುಗಳ ಕಿಟ್‍ಗಳನ್ನು ಹಾಡಿಯ 20 ಕುಟುಂಬದವರಿಗೆ ವಿತರಿಸಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ, ಬೋಮೇಗೌಡನ ಚಿಣ್ಣಪ್ಪ, ಕರವಸೂಲಿಗಾರ ಅನಿಲ್ ಮತ್ತು ಸಿಬ್ಬಂದಿ ವರ್ಗದವರು ಇದ್ದರು.