ಮಡಿಕೇರಿ, ಏ. 17: ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಡುವೆ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿರುವ ಹಲವು ಮಂದಿಗೆ ಮಡಿಕೇರಿ ಕೊಡವ ಸಮಾಜದ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೊಡವ ಸಮಾಜ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದ್ದು; ನಿನ್ನೆಯಿಂದ ಸುಮಾರು 100 ರಿಂದ 120 ಮಂದಿಗೆ ಉತ್ತಮ ಭೋಜನವನ್ನು ಅಚ್ಚುಕಟ್ಟಾಗಿ ಈ ಸೇವಾನಿರತರನ್ನು ಕೂರಿಸಿ ಉಣ ಬಡಿಸಲಾಗುತ್ತಿದೆ. ಪ್ರಸ್ತುತ ನಿರ್ದಿಷ್ಟವಾಗಿ ವ್ಯವಸ್ಥೆ ಮಾಡಲಾಗಿ ರುವಂತೆ ಗುರುತಿಸಲ್ಪಟ್ಟಿರುವ ಪೊಲೀಸರು, ಪೌರ ಕಾರ್ಮಿಕರುಉ, ಆರೋಗ್ಯ ಸಿಬ್ಬಂದಿಗಳಿಗೆ ಅಪರಾಹ್ನ 12.30 ರಿಂದ 2.30ರ ಅವಧಿಯಲ್ಲಿ ತಂಡವಾಗಿ ಒದಗಿಸಲಾಗುತ್ತಿದೆ. ಲಾಕ್‍ಡೌನ್ ನಿರ್ಬಂಧವಿರುವ ಮೇ 3ರ ತನಕ ಈ ಸೇವೆಯನ್ನು ಮುಂದುವರಿಸಲು ತೀರ್ಮಾನಿಸ ಲಾಗಿದೆ.ಸ್ವತಃ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗಾಂಡ

ಎಸ್. ದೇವಯ್ಯ, (ಮೊದಲ ಪುಟದಿಂದ) ಉಪಾಧ್ಯಕ್ಷ ಚೋವಂಡ ಡಿ. ಕಾಳಪ್ಪ, ಕಾರ್ಯದರ್ಶಿ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ ಹಾಗೂ ಇತರ ನಿರ್ದೇಶಕರು ಇದರ ಉಸ್ತುವಾರಿಯನ್ನು ಗಮನಿಸುವ ಮೂಲಕ ಎಚ್ಚರಿಕೆ ವಹಿಸಿದ್ದಾರೆ.