ಮಡಿಕೇರಿ, ಏ. 17 : ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ತಾ. 24 ಅಥವಾ 25 ರಂದು ಪವಿತ್ರ ರಂಜಾನ್ ಹಬ್ಬವು ಪ್ರಾರಂಭವಾಗಲಿರುವುದರಿಂದ ಮೇ 3 ರವರೆಗೆ ಜಿಲ್ಲೆಯ ಮಸೀದಿ, ಮದರಸ ಮತ್ತು ದರ್ಗಾಗಳಲ್ಲಿ ರಂಜಾನ್ ಕುರಿತು ಯಾವುದೇ ಸಹರಿ, ಇಫ್ತಿಯಾರ್ ಕೂಟ, ತರಾವೀಹ್ ನಮಾಜ್, ಶುಕ್ರವಾರದ ಪ್ರಾರ್ಥನೆಯನ್ನು ಒಳಗೊಂಡಂತೆ ದೈನಂದಿನ ಸಾಮೂಹಿಕ ನಮಾಝ್ ಪ್ರಾರ್ಥನೆ ನಿರ್ಬಂಧಿಸಬೇಕೆಂದು ಈ ಮೂಲಕ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಆಡಳಿತ ಮಂಡಳಿಗಳು ಸಾರ್ವಜನಿಕ ಆರೋಗ್ಯ ಹಿತ ದೃಷ್ಟಿಯಿಂದ ಈ ಆದೇಶವನ್ನು ಚಾಚು ತಪ್ಪದೆ ಪಾಲಿಸಲು ಸೂಚಿಸಿದೆ.
ಕೊರೊನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕರು ಚಾಚು ತಪ್ಪದೆ ಪಾಲಿಸಬೇಕೆಂದು ಕೊಡಗು ಜಿಲ್ಲಾ ವಕ್ಪ್ ಸಲಹಾ ಸಮಿತಿ ವಕ್ಫ್ ಅಧಿಕಾರಿ ಆದೇಶಿಸಿದ್ದಾರೆ.