ಕಣಿವೆ, ಏ. 18: ಮಡಿಕೇರಿ ರಸ್ತೆಯ ಆನೆಕಾಡು ಅರಣ್ಯದ ಹೆದ್ದಾರಿ ಅಂಚಿನಲ್ಲಿ ಕೋತಿಗಳ ಹಿಂಡು ಆಹಾರಕ್ಕಾಗಿ ಪರದಾಡುತ್ತಿದ್ದ ಚಿತ್ರಣ ಕಂಡು ಬಂತು. ರಸ್ತೆಯಲ್ಲಿ ಸಾಗುವ ಬೆರಳೆಣಿಕೆಯ ವಾಹನಗಳತ್ತ ನೋಟ ಬೀರುತ್ತಿದ್ದ ಕೋತಿಗಳು ನಮಗೆ ಏನಾದರು ಯಾರಾದರೂ ತಿನಿಸನ್ನು ಕೊಡುತ್ತಾರಾ? ಎಂದು ಕೇಳಿದಂತೆ ನೋಡುಗರಿಗೆ ಭಾಸವಾಗುತ್ತಿತ್ತು. ಅದರಲ್ಲೂ ಎಳೆಯ ಕಂದಮ್ಮಗಳನ್ನು ಹೊಟ್ಟೆಯ ಮೇಲೆ ಬಚ್ಚಿಟ್ಟು ಓಡಾಡುತ್ತಿದ್ದ ಅಮ್ಮಂದಿರ ಆಕ್ರಂದನವಂತೂ ಹೇಳತೀರದಂತಿತ್ತು. ಯಾವುದೇ ಒಂದಾದರೂ ತಳಿಯ ಹಣ್ಣುಗಳ ಗಿಡಮರಗಳೇ ಇಲ್ಲದ ಕೇವಲ ಕುರುಚಲು ಗಿಡಗಳು ಬೆಳೆದಿರುವ ಆನೆಕಾಡು ಅರಣ್ಯದಂಚಿನಲ್ಲಿ ಸಣ್ಣ ಪುಟ್ಟ ಗಿಡ ಗಂಟೆಗಳ ಮೇಲೆ ಅತ್ತಿಂದಿತ್ತ ಓಡಾಡುತ್ತಾ ಆಹಾರ ಅರಸುತ್ತಿದ್ದ ಕೋತಿಗಳ ಹಿಂಡಿನ ಮೇಲೆ ಹೆದ್ದಾರಿ ಸಂಚಾರಿಗಳು ಅಥವಾ ಅರಣ್ಯ ಇಲಾಖೆಯವರು ಮಾನವೀಯತೆ ಮೆರೆದು ಬಾಳೆ ಹಣ್ಣು, ಬಿಸ್ಕತ್ ಅಥವಾ ಏನಾದರೂ ತಿನಿಸುಗಳನ್ನು ನೀಡಿದರೆ ಅವುಗಳ ಹಸಿವನ್ನು ಒಂದಷ್ಟು ನಿವಾರಿಸಿದ ಪುಣ್ಯ ಬರುತ್ತದೆ.
- ಕೆ.ಎಸ್. ಮೂರ್ತಿ