ಸಿದ್ದಾಪುರ, ಏ. 18: ವೀರಾಜಪೇಟೆ ತಾಲೂಕು ಪುಲಿಯೇರಿ ಗ್ರಾಮದಲ್ಲಿ ಕಾಡುಕೋಣವನ್ನು ಬೇಟೆಯಾಡಿ ಮಾಂಸ ಮಾಡಿ ಸಾಗಾಟ ಮಾಡಿದ್ದÀ ಇಬ್ಬರನ್ನು ಬಂಧಿಸುವಲ್ಲಿ ವೀರಾಜಪೇಟೆ ಅರಣ್ಯ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪುಲಿಯೇರಿ ಗ್ರಾಮದ ಮಂಡೇಪಂಡ ದೇವಯ್ಯ ಅವರ ಪಾಳುಬಿದ್ದ ಕಾಡಿನಲ್ಲಿ ಬೇಟೆಯಾಡಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರೋಶಿಣಿ ತಂಡ ಕಾರ್ಯಾಚರಣೆ ನಡೆಸಿ ಕಾಡುಕೋಣದ ಚರ್ಮ, ಕರುಳು ಮತ್ತು ಮೂಳೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯು.ಕೆ. ಸುಬ್ಬಯ್ಯ (45) ಹಾಗೂ ಮತ್ತೋರ್ವ ಅಪ್ರಾಪ್ತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್ ಅಮ್ಮತ್ತಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಿವಕುಮಾರ್, ಅರಣ್ಯ ರಕ್ಷಕ ಅರುಣ್ ಹಾಗೂ ಆರ್. ಆರ್. ಟಿ ತಂಡದ ಅಚ್ಚಯ್ಯ, ದಿಲೀಪ, ವಿನೋದ, ರಾಚ, ಮುರುಗ, ಮಂಜು, ಆದರ್ಶ, ವಿನೋತ್ ಪಾಲ್ಗೊಂಡಿದ್ದರು.