ವೀರಾಜಪೇಟೆ, ಏ. 18: ಮಗಳು ಗರ್ಭಿಣಿ ಎಂದು ಪಾಸ್ ಪಡೆದು ಪಾಸ್ ದುರುಪಯೋಗ ಪಡಿಸಿಕೊಂಡು ಮಗಳು ಮತ್ತು ಅಳಿಯನನ್ನು ಮನೆಗೆ ಕರೆತಂದ ವ್ಯಾಪಾರಿಯ ವಿರುದ್ಧ ಪ್ರಕರಣ ದಾಖಲಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.ವೀರಾಜಪೇಟೆ ನಗರದ ತೆಲುಗರಬೀದಿಯ ನಿವಾಸಿ, ವ್ಯಾಪಾರಿ ತನ್ನ ಮಗಳು ಗರ್ಭಿಣಿ ಯಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋಗಬೇಕೆಂದು ಸುಳ್ಳು ಮಾಹಿತಿ ನೀಡಿ ಪಾಸ್ ಪಡೆದು ಹೊರ ಜಿಲ್ಲೆಯಲ್ಲಿದ್ದ ಮಗಳು ಮತ್ತು ಅಳಿಯ, ಮಗುವನ್ನು ಮನೆಗೆ ಕರೆಸಿಕೊಂಡಿದ್ದಾನೆ. ಇದೀಗ ಸುಳ್ಳು ಪಾಸ್ ಪಡೆದುಕೊಂಡು ಮಗಳನ್ನು ಕರೆತಂದ ವ್ಯಾಪಾರಿ, ಚಾಲಕ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.ಘಟನೆಯ ವಿವರ: ನಗರದ ತೆಲುಗರ ಬೀದಿ ನಿವಾಸಿ ಟಿ.ಪಿ. ಶ್ರೀನಿವಾಸ್ ಮಗಳನ್ನು ನೋಡುವ ತವಕ ಮತ್ತು ವಾತ್ಸಲ್ಯದಿಂದ ನೆರೆಯ ರಾಜ್ಯದಲ್ಲಿದ್ದ ಮಗಳನ್ನು ಮನೆಗೆ ಕರೆತರುವ ಉದ್ದೇಶದಿಂದ ತಾ. 13 ರಂದು ಪೆÇಲೀಸ್ ಉಪವಿಭಾಗ ಅಧಿಕಾರಿಗಳಿಂದ ಪಾಸ್ ಪಡೆದಿದ್ದಾರೆ. ತಾ. 14 ರಂದು ತನ್ನ ವಾಹನವನ್ನು ಚಾಲಕನಿಗೆ ನೀಡಿ ಮಗಳ ಕುಟುಂಬ ಬೆಂಗಳೂರಿನ ಹೊರವಲಯದ ಸ್ಥಳದಲ್ಲಿದ್ದಾರೆ ಎಂದು ತಿಳಿಸಿ ಅವರನ್ನು ಕರೆದುಕೊಂಡು ಬಾ ಎಂದು ಚಾಲಕನಿಗೆ ತಿಳಿಸಿದ್ದಾರೆ. 14ರ ಬೆಳಿಗ್ಗೆ ತೆರಳಿದ ಚಾಲಕ ದರ್ಶನ್ ಸಂಗಡಿಗ ಕಾವೇರನೊಂದಿಗೆ ಬೆಂಗಳೂರು ತಲುಪಿ ಸ್ಥಳದಲ್ಲಿದ್ದ ಮಗಳು ಸುಮ, ಅಳಿಯ ವಿಷ್ಣು ಮತ್ತು ಮಗುವನ್ನು ಕರೆದುಕೊಂಡು ಮಾರ್ಗದಲ್ಲಿ ಪಾಸ್ ತೋರಿಸಿಕೊಂಡು ವೀರಾಜಪೇಟೆಗೆ ಆಗಮಿಸಿದ್ದಾನೆ. ಮನೆಗೆ ಬಂದ ಮಗಳ ಕುಟುಂಬದ ಬಗ್ಗೆ ಪೆÇಲೀಸ್ ಇಲಾಖೆ, ಪೆÇಲೀಸ್ ವರಿಷÀ್ಠರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದಾರೆ. ದೇಶವೇ ಮಹಾಮಾರಿ
(ಮೊದಲ ಪುಟದಿಂದ) ಕೊರೊನಾ ಸೋಂಕಿನಿಂದ ತತ್ತರಿಸಿದೆ. ಸೋಂಕು ತಡೆಗಟ್ಟಲು ಲಾಕ್ಡೌನ್ ಮಾಡಲಾಗಿದ್ದು, ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗಿದೆ. ಜಿಲ್ಲೆ ಮತ್ತು ರಾಜ್ಯಗಳಿಂದ ಇತರ ಸ್ಥಳಗಳಿಗೆ ತೆರಳದಂತೆ ನಾಕಾಬಂದಿ ಮಾಡಿದ್ದರೂ ಕೆಲವರು ಸುಳ್ಳು ದಾಖಲೆಯನ್ನು ನೀಡಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಮುಂದಾಗಿರುವುದು ವಿಪರ್ಯಾಸ.
ಸೋಂಕು ಕ್ಷಣಮಾತ್ರದಲ್ಲಿ ಹರಡುವ ರೋಗವಾಗಿದೆ. ದ್ವೇಷÀ ಪೂರಕ ಕೃತ್ಯ ಉದ್ದೇಶದಿಂದ ಪಾಸ್ ದುರುಪಯೋಗ ಮಾಡಿಕೊಂಡ ಶ್ರೀನಿವಾಸ್, ಚಾಲಕ ದರ್ಶನ್ ಸೇರಿದಂತೆ ಐವರ ವಿರುದ್ಧ ವೀರಾಜಪೇಟೆ ನಗರ ಪೆÇಲೀಸ್ ಠಾಣೆಯಲ್ಲಿ 188, 269, 270ರೆ/ವಿ 34, ಐ.ಪಿ.ಸಿ 52, ಡಿ.ಎಂ. 2005 ರೀತ್ಯ ಪ್ರಕರಣ ದಾಖಲು ಮಾಡಿ ಕೊಂಡು ಕಾರನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಕ್ರಮಗಳನ್ನು ಜಾರಿಗೆ ಗೊಳಿಸಿದೆಯಾದರೂ ನಾಗರಿಕರು ಸ್ಪಂದಿಸದೆ ರೋಗ ಹರಡಲು ಪರೋಕ್ಷವಾಗಿ ಕಾರಣ ಕರ್ತರಾಗುತ್ತಿರುವುದು ವಿಷಾದ ನೀಯ. ಪಾಸ್ ದುರುಪಯೋಗ ಮಾಡಿಕೊಳ್ಳದಂತೆ ಮತ್ತು ಪಾಸ್ ಅಗತ್ಯ ಸಂದರ್ಭಕ್ಕೆ ಮಾತ್ರ ಉಪ ಯೋಗಿಸುವಂತೆ, ಪಾಸ್ ದುರುಪ ಯೋಗ ಮಾಡಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿ ಸಲಾಗುತ್ತದೆ ಎಂದು ಪೆÇಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. -ಕೆ.ಕೆ.ಎಸ್.