ಕೂಡಿಗೆ, ಏ. 18 : ಕುಶಾಲನಗರ ಮಾಜಿ ಸೈನಿಕರ ಸಂಘದಿಂದ ಪ್ರಧಾನ ಮಂತ್ರಿ ಕೊರೊನಾ ಪರಿಹಾರ ನಿಧಿಗೆ ರೂ50 ಸಾವಿರ ದೇಣಿಗೆ ನೀಡಲಾಯಿತು. ಸಂಘದ ಹಿರಿಯರಾದ ಲೆ.ಕ.ನಾರಾಯಣ ಮೂರ್ತಿ ಮತ್ತು ಕೆ.ಎ.ಜೋಯಪ್ಪ ಅವರ ಸಲಹೆ ಮೇರೆಗೆ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಪ್ರಧಾನಿ ಅವರ ಖಾತೆಗೆ ಚೆಕ್ ಮೂಲಕ ಪರಿಹಾರದ ಮೊತ್ತ ರವಾನಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಮೊಣ್ಣಪ್ಪ, ಕಾರ್ಯದರ್ಶಿ ಎಸ್.ಆರ್.ಮಾದಪ್ಪ, ಖಜಾಂಚಿ ನರೇಶ್ ಮತ್ತು ನಿರ್ದೇಶ ಕರುಗಳಾದ ಮನುನಂಜುಂಡ, ರವಿ, ಸೋಮಪ್ಪ , ಚಿಣ್ಣಪ್ಪ ಸೇರಿದಂತೆ ಸಮಿತಿಯವರು ಇದ್ದರು.