ಸೋಮವಾರಪೇಟೆ, ಏ. 18: ಮೂರ್ನಾಡು ಸಮೀಪದ ಹೊದ್ದೂರಿನಲ್ಲಿ ಭಾರೀ ಪ್ರಮಾಣದ ವೈನ್ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಮಡಿಕೇರಿ ಅಬಕಾರಿ ಇಲಾಖಾಧಿಕಾರಿಗಳು ಸುಮಾರು 480 ಲೀಟರ್‍ನಷ್ಟು ವಿವಿಧ ಹಣ್ಣಿನ ರಸವನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಹೊದ್ದೂರು ಗ್ರಾಮದ ಮಹಿಳೆಯೋರ್ವರು ತಮ್ಮ ಮನೆಯಲ್ಲಿ ಅಕ್ರಮವಾಗಿ ಭಾರೀ ಪ್ರಮಾಣದ ವೈನ್ ತಯಾರಿಕೆಗೆ ಸಿದ್ಧತೆ ನಡೆಸಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಧಾಳಿ ನಡೆಸಿದ ಅಬಕಾರಿ ಇಲಾಖೆಯ ಸಬ್ ಇನ್ಸ್‍ಪೆಕ್ಟರ್ ಬಿ.ಎಸ್. ಲೋಕೇಶ್, ಗಾರ್ಡ್ ಹೆಚ್.ಎ. ರಾಜು, ಕೆ.ಪಿ. ಸರಿತ, ಮೋಹನ್‍ಕುಮಾರ್ ಅವರುಗಳು 480 ಲೀಟರ್ ವಿವಿಧ ಹಣ್ಣಿನ ರಸವನ್ನು ವಶಕ್ಕೆ ಪಡೆದು ಸ್ಥಳದಲ್ಲೇ ನೆಲಕ್ಕೆ ಚೆಲ್ಲಿ, ಮಹಿಳೆಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.