ವೀರಾಜಪೇಟೆ, ಏ. 18: ಮನೆಗೆ ಹೋಗುವ ದಾರಿಯ ವಿಚಾರದಲ್ಲಿ ಎರಡು ಕಡೆಯವರ ನಡುವೆ ಪರಸ್ಪರ ಗ¯ಭೆ ಏರ್ಪಟ್ಟಿದ್ದು ಇಲ್ಲಿನ ನಗರ ಪೊಲೀಸರು ಎರಡು ಕಡೆಯವರ ಮೇಲೆ ಪರಸ್ಪರ ಪ್ರಕರಣ ದಾಖಲಿಸಿದ್ದಾರೆ.

ಇಲ್ಲಿನ ಗಾಂಧಿನಗರದ ಎಂ. ಬೋಪಯ್ಯ ಎಂಬವರು, ತಾನು ಮನೆಗೆ ತೆರಳುವ ದಾರಿಯನ್ನು ಅಡ್ಡ ಪಡಿಸಿದರೆಂದು ನೀಡಿದ ದೂರಿನ ಮೇರೆ ನಗರ ಪೊಲೀಸರು ಕೆ. ಸುಬ್ರಮಣಿ ಹಾಗೂ ಕೆ. ಕಾವೇರಮ್ಮ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದೇ ಪ್ರಕರಣದಲ್ಲಿ ಕೆ. ಕಾವೇರಮ್ಮ ಎಂಬವರು ನೀಡಿದ ದೂರಿನ ಮೇರೆ ಮತ್ತೊಂದು ಕಡೆಯ ಎಂ. ಬೋಪಯ್ಯ, ಕುಟ್ಟಪ್ಪ ಹಾಗೂ ಯಶೋಧ ಎಂಬ ಮೂವರ ಮೇಲೆ ನಡೆಯುವ ದಾರಿಗೆ ತಡೆ, ಹಲ್ಲೆ, ಜೀವ ಭಯದ ಬೆದರಿಕೆಯ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.