ಗೋಣಿಕೊಪ್ಪಲು, ಏ. 19: ಬಿಜೆಪಿ ಪಕ್ಷದ ವೀರಾಜಪೇಟೆ ತಾಲೂಕಿನ ಮಹಿಳಾ ಮೋರ್ಚಾದ ವತಿಯಿಂದ ತಾಲೂಕು ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ ಉಚಿತವಾಗಿ ಮಾಸ್ಕ್ ವಿತರಿಸಿದರು. ಬಿಜೆಪಿ ಮಹಿಳಾ ಮೋರ್ಜಾದ ಜಿಲ್ಲಾಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ ಮುಂದಾಳತ್ವದಲ್ಲಿ ಪಕ್ಷದ ಪ್ರಮುಖರು ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾಸ್ಕ್ ಇಲ್ಲದೆ ತರಕಾರಿ ಖರೀದಿಸಲು ಆಗಮಿಸಿದ ನಾಗರಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.

ನಾಗರಿಕರಲ್ಲಿ ಕೊರೊನಾ ವೈರಸ್ ಬಗ್ಗೆ ಎಚ್ಚರ ವಹಿಸಲು ಕಳೆದ ಕೆಲವು ದಿನಗಳಿಂದ ಸುಮಿ ಸುಬ್ಬಯ್ಯ ತಾವೇ ಮನೆಯಲ್ಲಿಯೇ ನೂರಾರು ಮಾಸ್ಕ್ ತಯಾರಿಸಿದ್ದರು. ಈ ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸಿದರು. ನಗರಕ್ಕೆ ಆಗಮಿಸುವ ಸಂದರ್ಭ ಮಾಸ್ಕ್ ಧರಿಸಿ ಬರುವಂತೆ ನಾಗರಿಕರಿಗೆ ಮನವಿ ಮಾಡಿದರು. ಈ ಸಂದರ್ಭ ತಾಲೂಕು ಕಾರ್ಯದರ್ಶಿ ರತಿ ಅಚ್ಚಪ್ಪ, ಆರ್.ಎಂ.ಸಿ. ಅಧ್ಯಕ್ಷ ಸುಜಾ ಪೂಣಚ್ಚ, ಸದಸ್ಯ ಗುಮ್ಮಟೀರ ಕಿಲನ್ ಗಣಪತಿ, ಮುಂತಾದವರು ಹಾಜರಿದ್ದರು.