ಮಡಿಕೇರಿ, ಏ. 19: ದೇಶದೆಲ್ಲೆಡೆ ಮಹಾಮಾರಿಯಾಗಿ ಆವರಿಸುತ್ತಿರುವ ಕೊರೊನಾದ ಸೋಂಕು ಕೊಡಗು ಜಿಲ್ಲೆಯಲ್ಲಿ ಹರಡದಂತೆ ಮುಂಜಾಗೃತ ವಾಗಿ ಜಿಲ್ಲಾಡಳಿತ ಕಟ್ಟೆಚ್ಚರವಾಗಿ ನಿಗಾವಹಿಸುವಂತೆ ಪೆÇಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಜನರ ನಿಯಂತ್ರಣ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸುವುದು, ಆಯಕಟ್ಟಿನ ಸ್ಥಳಗಳಲ್ಲಿ ತಪಾಸಣೆ ನಿರತರಾಗಿರು ವುದು ಮುಂತಾದ ಕೆಲಸಗಳಿಗೆ ನಿಯೋಜನೆಗೊಂಡಿರುವ ನಮ್ಮ ಆರಕ್ಷಕ ಸಿಬ್ಬಂದಿಗಳು ಸುಡುವ ಉರಿ ಬಿಸಿಲಿನಲ್ಲೂ ಕೆಲಸ ನಿರ್ವಹಿಸುತ್ತಿದ್ದು, ಆರಕ್ಷಕರರಿಗಾಗಿ ಮಡಿಕೇರಿ ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ ಅವರ ನೇತೃತ್ವದಲ್ಲಿ ದಾಹ ನೀಗಿಸಿಕೊಳ್ಳಲು ತಂಪಾದ ಮಜ್ಜಿಗೆ ವಿತರಣೆ ಮಾಡಲಾಯಿತು.
ರಕ್ಷಣಾ ವೇದಿಕೆಯ ಖಜಾಂಜಿ ಉಮೇಶ್ ಕುಮಾರ್ ನಿರ್ದೇಶಕ ಪಾಪು ರವಿ, ಹಿರಿಯ ಸದಸ್ಯ ಗಣೇಶ್, ಮಹಿಳಾ ಘಟಕದ ನಿರ್ದೇಶಕಿ ಟೀನಾ ಹಾಗೂ ಮಡಿಕೇರಿ ರಕ್ಷಣಾ ವೇದಿಕೆಯ ವಿದ್ಯಾರ್ಥಿ ಘಟಕ ಅರುಣ್ ಕುಮಾರ್ ಮತ್ತು ದಿವ್ಯಾ ಭಾಗವಹಿಸಿದ್ದರು.