ಗೋಣಿಕೊಪ್ಪ ವರದಿ, ಏ. 19: ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೋಣಿಕೊಪ್ಪ ಮತ್ತು ಶ್ರೀಮಂಗಲ ಉಪ ವಿಭಾಗಗಳ ಸೆಸ್ಕ್ ಲೈನ್ ಮೆನ್‍ಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಸುಮಾರು 45 ಸಿಬ್ಬಂದಿ ತಪಾಸಣೆ ಮಾಡಿಸಿಕೊಂಡರು. ಸಾಮಾನ್ಯ ತಪಾಸಣೆ ಹಾಗೂ ಉಷ್ಣಾಂಶ ಪರೀಕ್ಷೆ ನಡೆಸಲಾಯಿತು. ಡಾ. ಮೊಹಮ್ಮದ್ ಪರೀಕ್ಷೆ ನಡೆಸಿ, ಕೊರೊನಾ ವೈರಸ್ ಹರಡದಂತೆ ಆರೋಗ್ಯ ಕಾಪಾಡಿಕೊಳ್ಳಬಹುದಾದ ಕುರಿತು ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಮುಂದಾಳತ್ವದಲ್ಲಿ ಶಿಬಿರ ನಡೆಯಿತು.