ಪೊನ್ನಂಪೇಟೆ, ಸೆ. 29: ಗೋಣಿಕೊಪ್ಪ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಘಟಕ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಆಚರಿಸಲಾಯಿತು. ಕೊರೊನಾ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕಡಿಮೆ ಸಂಖ್ಯೆಯಲ್ಲಿ ಸ್ವಯಂಸೇವಕರು ಪಾಲ್ಗೊಂಡಿದ್ದರು. ಈ ಸಂದರ್ಭ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ.ಕೆ.ವಿ.ಕುಸುಮಾಧರ್ ವಿದ್ಯಾಥಿಗಳಲ್ಲಿ ಶಿಸ್ತು, ಸ್ವಚ್ಛತೆ, ಸೇವಾ ಮನೋಭಾವ, ದೇಶಾಭಿಮಾನ ಹಾಗೂ ಪರಿಸರ ಪ್ರೇಮವನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದು ಎಂದರು. ಕಾರ್ಯಕ್ರಮದಲ್ಲಿ ಪ್ರೊ.ಎಂ.ಎಸ್. ಭಾರತಿ, ಪ್ರೊ.ಎಂ.ಬಿ. ಕಾವೇರಪ್ಪ, ಪ್ರೊ.ತಿಪ್ಪೇಸ್ವಾಮಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಎಂ.ಎನ್. ವನಿತ್‍ಕುಮಾರ್, ಎನ್.ಪಿ. ರೀತ, ಕಚೇರಿ ಅಧೀಕ್ಷಕ ಸೋಮನಾಥ್ ಹಾಗೂ ಸ್ವಯಂ ಸೇವಕರು ಹಾಜರಿದ್ದರು.