ವೀರಾಜಪೇಟೆ, ಸೆ. 29: ವೀರಾಜಪೇಟೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವಾಹನ ಚಾಲಕರು ಹಾಗೂ ವಾಟರ್‍ಮೆನ್ ಗಳಿಗೆ ಪೌರ ಕಾರ್ಮಿಕರ ಮಾದರಿಯಲ್ಲಿ ಎಲ್ಲಾ ಸೌಲಭ್ಯಗಳಿಂದ ನೇರ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ಸುಮಾರು 17ಮಂದಿ ಹೊರ ಗುತ್ತಿಗೆ ನೌಕರರು ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಇಲ್ಲಿನ ಪ್ರಭಾರ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಮುಷ್ಕರದಲ್ಲಿ ಹೊರ ಗುತ್ತಿಗೆ ನೌಕರರಾದ ಐವಾನ್ ಅವರ ನೇತೃತ್ವದಲ್ಲಿ 17 ಮಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.