ಮಡಿಕೇರಿ, ಸೆ. 29: ಮಡಿಕೇರಿ ತಾಲೂಕು ಬೇತು ಗ್ರಾಮದ 65 ವರ್ಷದ ಪುರುಷ ಮತ್ತು ವೀರಾಜಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮದ 70 ವರ್ಷದ ಪುರುಷರೊಬ್ಬರು ಮೃತರಾಗಿದ್ದು, ಕೋವಿಡ್ ಸಂಬಂಧ ಮೃತರ ಸಂಖ್ಯೆ 36ಕ್ಕೇರಿದೆ. ಜಿಲ್ಲೆಯಲ್ಲಿ 68 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2717 ಪ್ರಕರಣಗಳು ವರದಿಯಾಗಿದ್ದು, 2238 ಮಂದಿ ಗುಣಮುಖರಾಗಿದ್ದಾರೆ. 443 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 86 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 70 ಮಂದಿ ಕೋವಿಡ್ ಕೇರ್ ಸೆಂಟರ್ನಲ್ಲಿ ಹಾಗೂ 287 ಮಂದಿ ಹೋಮ್ ಐಸೋಲೇಷನ್ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 396 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಶನಿವಾರಸಂತೆ ಕಾನ್ವೆಂಟ್ ರಸ್ತೆಯ 48, 64 ಮತ್ತು 49 ವರ್ಷದ ಮಹಿಳೆಯರು, ಶನಿವಾರಸಂತೆ ಈಚಲಬೀಡು ಹೋಬಳಿಯ 48 ವರ್ಷದ ಪುರುಷ, ಬಿರುನಾಣಿಯ 50 ವರ್ಷದ ಪುರುಷ, ಮಡಿಕೇರಿ ಸುದರ್ಶನ ಅತಿಥಿ ಗೃಹ ಸಮೀಪದ 15 ವರ್ಷದ ಬಾಲಕಿ, ಕುಶಾಲನಗರ ಕುಡ್ಲೂರು ವೀರಭೂಮಿ ವೃತ್ತ ಸಮೀಪದ 32 ವರ್ಷದ ಪುರುಷ, ಮಾದಾಪುರ ಜಂಬೂರುಬಾಣೆಯ 18 ವರ್ಷದ ಪುರುಷ, ಕುಶಾಲನಗರ ರಂಗಸಮುದ್ರದ 21 ವರ್ಷದ ಪುರುಷ, ಕುಶಾಲನಗರ ಕೂಡುಮಂಗಳೂರು ಸಮುದಾಯ ಭವನ ಸಮೀಪದ 63 ವರ್ಷದ ಪುರುಷ, ಸೋಮವಾರಪೇಟೆ ನಂದಿಗುಂದದ 54 ವರ್ಷದ ಮಹಿಳೆ, 28 ವರ್ಷದ ಪುರುಷ ಮತ್ತು 27 ವರ್ಷದ ಮಹಿಳೆ, ಸೋಮವಾರಪೇಟೆ ಅಬ್ಬೂರು ಕಟ್ಟೆಯ ಆದಿನಡೂರು ಗ್ರಾಮದ 32 ವರ್ಷದ ಮಹಿಳೆ, 2,13 ವರ್ಷದ ಬಾಲಕಿಯರು, 38 ವರ್ಷದ ಪುರುಷ, 7 ಮತ್ತು 11 ವರ್ಷದ ಬಾಲಕಿ, ವೀರಾಜಪೇಟೆ ದೇವಾಂಗ ಬೀದಿಯ 53 ವರ್ಷದ ಮಹಿಳೆ, ವೀರಾಜಪೇಟೆ ಒಂಟಿಯಂಗಡಿ ಕಣ್ಣಂಗಾಲ ಅಂಚೆಯ 32 ವರ್ಷದ ಮಹಿಳೆ ಮತ್ತು 4 ವರ್ಷದ ಬಾಲಕಿ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 52 ವರ್ಷದ ಪುರುಷ, ಗೋಣಿಕೊಪ್ಪ ಸೀಗೆತೋಡುವಿನ ಸೇತುವೆ ಸಮೀಪದ 15 ವರ್ಷದ ಮಹಿಳೆ, ವೀರಾಜಪೇಟೆ ಕೈಕೇರಿ ಗ್ರಾಮ ಮತ್ತು ಅಂಚೆಯ ಕ್ಯಾಂಡಲ್ ಫ್ಯಾಕ್ಟರಿ ಸಮೀಪದ 65 ವರ್ಷದ ಪುರುಷ, ಗೋಣಿಕೊಪ್ಪ ಉಮಾ ಮಹೇಶ್ವರಿ ಲೇಔಟ್ ನ 30 ವರ್ಷದ ಮಹಿಳೆ, 3 ವರ್ಷದ ಬಾಲಕಿ ಮತ್ತು 33 ವರ್ಷದ ಪುರುಷ, ಗೋಣಿಕೊಪ್ಪ ಉಮಾ ಮಹೇಶ್ವರಿ ಲೇಔಟ್ ನ 2ನೇ ಕ್ರಾಸ್ 1ನೇ ಹಂತದ 72 ವರ್ಷದ ಪುರುಷ, ಗೋಣಿಕೊಪ್ಪ ಎಚ್.ಸಿ ಪುರ ಆರ್.ಆರ್ ಫರ್ನೀಚರ್ ಅಂಗಡಿ ಸಮೀಪದ 55 ವರ್ಷದ ಪುರುಷ, ನಾಪೆÇೀಕ್ಲು ಕೊಡವ ಸಮಾಜದ 36 ವರ್ಷದ ಪುರುಷ ಮತ್ತು 75 ವರ್ಷದ ಮಹಿಳೆ, ನಾಪೆÇೀಕ್ಲು ಬೇತು ರಸ್ತೆಯ 38 ವರ್ಷದ ಮಹಿಳೆ, ವೀರಾಜಪೇಟೆ ಆರೆಂಜ್ ಕೌಂಟಿ ಕರಡಿಗೋಡುವಿನ 27 ವರ್ಷದ ಪುರುಷ, ಮೂರ್ನಾಡು ಕೊಡಂಬೂರು ಗ್ರಾಮದ ನ್ಯಾಚುರಲ್ ವೈನ್ ಶಾಪ್ ಸಮೀಪದ 68 ವರ್ಷದ ಮಹಿಳೆ, ವೀರಾಜಪೇಟೆ ಕರಡಿಗೋಡು ಮುಳ್ಳೇತಾಡುವಿನ 28 ವರ್ಷದ ಪುರುಷ, ಸಂಪಾಜೆ ಕಲ್ಲುಗುಂಡಿಯ ಗ್ರಾಮ ಪಂಚಾಯಿತಿ ಕಟ್ಟಡ ಸಮೀಪದ 39 ವರ್ಷದ ಮಹಿಳೆ, 10,11 ವರ್ಷದ ಬಾಲಕಿಯರು ಮತ್ತು 44 ವರ್ಷದ ಪುರುಷ, ಗೋಣಿಕೊಪ್ಪ ಅಂಚೆ ಕಚೇರಿ ಹಿಂಭಾಗದ 41 ವರ್ಷದ ಪುರುಷ, ಮಡಿಕೇರಿ ಡೈರಿ ಫಾರಂನ 22 ವರ್ಷದ ಪುರುಷ, ವೀರಾಜಪೇಟೆ ಚಿಕ್ಕಪೇಟೆಯ ಆಂಜನೇಯ ದೇವಾಲಯ ಸಮೀಪದ 30 ವರ್ಷದ ಮಹಿಳೆ, ವೀರಾಜಪೇಟೆ ಆರೆಂಜ್ ಕೌಂಟಿ ಕರಡಿಗೋಡುವಿನ 32 ವರ್ಷದ ಪುರುಷ, ಕಾರೆಕಾಡು ರುದ್ರಭೂಮಿ ಸಮೀಪದ 42 ವರ್ಷದ ಪುರುಷ, ನೆಲ್ಲಿಹುದಿಕೇರಿ ಶಾಲೆ ಸಮೀಪದ 28 ವರ್ಷದ ಮಹಿಳೆ, ಸೋಮವಾರಪೇಟೆ ಶಿರಂಗಾಲ ಪಿ.ಎಚ್.ಸಿ ಸಮೀಪದ 28 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆ ಜನತಾ ಕಾಲೋನಿಯ 34 ವರ್ಷದ ಪುರುಷ, ಮಡಿಕೇರಿ ದೇಚೂರು ಅಪ್ಪಚ್ಚು ಕಾಂಪೌಂಡ್ ನ 72 ವರ್ಷದ ಮಹಿಳೆ, ವೀರಾಜಪೇಟೆ ಗಾಂಧೀನಗರದ ಪೆÇಲೀಸ್ ವಸತಿಗೃಹದ 27 ವರ್ಷದ ಪುರುಷ, ವೀರಾಜಪೇಟೆ ಮೀನು ಪೇಟೆಯ ಪೆÇಲೀಸ್ ವಸತಿಗೃಹದ 45 ವರ್ಷದ ಮಹಿಳೆ, ವೀರಾಜಪೇಟೆ ಆರೋಗ್ಯ ವಸತಿಗೃಹದ 71 ವರ್ಷದ ಪುರುಷ, ವೀರಾಜಪೇಟೆ ನೆಹರೂ ನಗರದ 60 ವರ್ಷದ ಪುರುಷ, ವೀರಾಜಪೇಟೆ ವಿಜಯನಗರ 2ನೇ ಹಂತದ 45 ವರ್ಷದ ಮಹಿಳೆ, ವೀರಾಜಪೇಟೆ ದಂತ ಕಾಲೇಜು ಸಮೀಪದ 35 ವರ್ಷದ ಮಹಿಳೆ, ಕುಶಾಲನಗರ ನಿಸರ್ಗಧಾಮ ಸಮೀಪದ 61 ವರ್ಷದ ಮಹಿಳೆ, ಮಡಿಕೇರಿ ಕನ್ನಿಕಾ ಲೇಔಟ್ ನ 30 ಮತ್ತು 34 ವರ್ಷದ ಮಹಿಳೆಯರು, ಕಾರಗುಂದ ಗ್ರಾಮದ ಕೋತೂರು ಬಸ್ ನಿಲ್ದಾಣ ಸಮೀಪದ 32 ವರ್ಷದ ಮಹಿಳೆ, ಕುಶಾಲನಗರ ಇಂದಿರಾ ಬಡಾವಣೆಯ 51 ವರ್ಷದ ಮಹಿಳೆ, ಮಡಿಕೇರಿ ಐಟಿಐ ಜಂಕ್ಷನ್ ನ 42 ವರ್ಷದ ಮಹಿಳೆ, ನಾಪೆÇೀಕ್ಲು ಬೇತುವಿನ ಕಾರೆಕಾಡು ರುದ್ರಭೂಮಿ ಸಮೀಪದ 38,18 ವರ್ಷದ ಮಹಿಳೆಯರು, 15 ಮತ್ತು 14 ವರ್ಷದ ಬಾಲಕರು, ಗೋಣಿಕೊಪ್ಪ ಮೈಸೂರಮ್ಮ ಕಾಲೋನಿಯ 22 ವರ್ಷದ ಮಹಿಳೆ, ಮಡಿಕೇರಿ ರೇಸ್ ಕೋರ್ಸ್ ರಸ್ತೆಯ ಲಿವಾ ಕ್ಲಿನಿಕ್ ಸಮೀಪದ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.