ಮಡಿಕೇರಿ, ಸೆ.29: ಅಕ್ಟೋಬರ್ 4 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಅವಧಿ, ಪತ್ರಿಕೆ-1 ಬೆ 9.30 ರಿಂದ 12 ಗಂಟೆಯವರೆಗೆ ಹಾಗೂ ಪತ್ರಿಕೆ-2 ಅಪರಾಹ್ನ 2 ಗಂಟೆಯಿಂದ 4.30 ಗಂಟೆವರೆಗೆ ನಡೆಯುತ್ತದೆ. ಪರೀಕ್ಷೆಯು ಮಡಿಕೇರಿ ಸ.ಪ.ಪೂ. ಕಾಲೇಜು ಮಡಿಕೇರಿ, ಮಡಿಕೇರಿ ಸ.ಮಾ.ಪ್ರಾ.ಶಾಲೆ ಮತ್ತು ಸಂತ ಮೈಕಲರ ಶಾಲೆ ಈ 3 ಕೇಂದ್ರಗಳಲ್ಲಿ ನಡೆಯಲಿದೆ.
ಪರೀಕ್ಷೆ ಪ್ರಾರಂಭವಾಗುವ 45 ನಿಮಿಷಗಳ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವುದು. ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯ. ಅಗತ್ಯ ಸ್ಯಾನಿಟೈಸರ್ ಮತ್ತು ಕುದಿಸಿ ಆರಿಸಿದ ನೀರನ್ನು ಅಭ್ಯರ್ಥಿಗಳೇ ತರುವುದು. ಕೋವಿಡ್-19 ನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿದ್ದರೆ ಅವರಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಾಗಿದ್ದು, ಅಕ್ಟೋಬರ್, 2 ರೊಳಗೆ ಮಾಹಿತಿಯನ್ನು ಉಪನಿರ್ದೇಶಕರ ದೂರವಾಣಿ 9448999344 ಅಥವಾ ನೋಡೆಲ್ ಅಧಿಕಾರಿ ದೂರವಾಣಿ ಸಂಖ್ಯೆ 9686891912 ನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.