ಮಡಿಕೇರಿ, ಸೆ. 29: ಪ್ರಸಕ್ತ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ ಯೋಜನೆಯಡಿ ಮಹಿಳಾ ಅಭಿವೃಧ್ದಿ ನಿಗಮದ ಸಹಾಯಧನದೊಂದಿಗೆ ಬ್ಯಾಂಕ್ ಸಾಲ ಸೌಲಭ್ಯ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆದು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ (ಹಂದಿ ಸಾಕಾಣಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ, ನರ್ಸರಿ, ಬ್ಯೂಟಿ ಪಾರ್ಲರ್, ಟೈಲರಿಂಗ್, ವ್ಯಾಪಾರ ಇತ್ಯಾದಿಗಳಿಗೆ) ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ವಾರ್ಷಿಕ ಆದಾಯ ರೂ. 1,50,000 ಕ್ಕೆ ಮೀರಿರಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಕ್ಕೆ ಮೀರಿರಬಾರದು. ಹಾಗೆಯೇ 18 ರಿಂದ 55 ವರ್ಷ ವಯೋಮಿತಿಗೊಳಪಟ್ಟು ಅರ್ಹ ಮಹಿಳೆಯರಿಗೆ (ವಿಧವೆಯರು, ಸಂಕಷ್ಟಕ್ಕೊಳಗಾದ, ಅಂಗವಿಕಲ ಮಹಿಳೆಯರು ಹಾಗೂ ದೇವದಾಸಿ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು) ಅವಕಾಶವಿರುತ್ತದೆ. ಅರ್ಜಿ ಪಡೆಯಲು ಅಕ್ಟೋಬರ್ 5 ಕೊನೆಯ ದಿನ ಆಗಿರುತ್ತದೆ. ಅರ್ಜಿ ಫಾರಂಗೆ ಹಾಗೂ ಇತರ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಸೋಮವಾರಪೇಟೆ ಇಲ್ಲಿ ಕಚೇರಿ ವೇಳೆಯಲ್ಲಿ ಹಾಗೂ ದೂರವಾಣಿ ಸಂಖ್ಯೆ:08276-282281 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.