ಮಡಿಕೇರಿ, ಸೆ. 29: ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿ ರುವ ಹಾಗೂ ಖರ್ಚಾದ ಅನುದಾನದ ಕಾಮಗಾರಿವಾರು ವಿವರ ನೀಡುವಂತೆ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಂದ ಮಾಹಿತಿ ಪಡೆದಿದ್ದಾರೆ.

ಎಸ್.ಟಿ. ಸೋಮಶೇಖರ್ ಅವರು ಕಳೆದ ಮೂರು ವರ್ಷ ಗಳಿಂದ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿರುವ ಅನುದಾನ ಮತ್ತು ಖರ್ಚಾದ ವಿವರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಡಿಕೇರಿ 2017-18ರಲ್ಲಿ ಆರ್‍ಕೆವಿವೈ ಯೋಜನೆಯಡಿಯಲ್ಲಿ ಮಡಿಕೇರಿ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಮುಚ್ಚು ಹರಾಜುಕಟ್ಟೆ ನಿರ್ಮಾಣ ಅದಕ್ಕೆ ಅಂದಾಜು ಮೊತ್ತ ರೂ. 50 ಲಕ್ಷ, ತಗುಲಿದ ಖರ್ಚು 50 ಲಕ್ಷ ರೂ. ಕಾಮಗಾರಿ ಪೂರ್ಣಗೊಂಡಿದೆ.

2018-19ರಲ್ಲಿ ನಬಾರ್ಡ್ ಸಂಸ್ಥೆಯ ಆರ್.ಐ.ಡಿ.ಎಫ್-24ರ ಯೋಜನೆಯಡಿ ಮಡಿಕೇರಿ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಶಾಪ್-ಕಂ-ಗೋದಾಮು ನಿರ್ಮಾಣಕ್ಕೆ ಅಂದಾಜು ಮೊತ್ತ 25 ಲಕ್ಷ ರೂ., ತಗುಲಿದ ಖರ್ಚು 21.58 ಲಕ್ಷ ರೂ. ಕಾಮಗಾರಿ ಮುಗಿಯುವ ಹಂತದಲ್ಲಿರುತ್ತದೆ. 2019-20ರಲ್ಲಿ ಯಾವುದೇ ಅನುದಾನ ಬಿಡುಗಡೆ ಯಾಗಿರುವುದಿಲ್ಲ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕುಶಾಲನಗರ 2017-18ರಲ್ಲಿ ಆರ್‍ಕೆವಿವೈ ಯೋಜನೆಯಡಿ ಸೋಮವಾರಪೇಟೆ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಕುಶಾಲನಗರ ಮಾರುಕಟ್ಟೆ ಪ್ರಾಂಗಣದಲ್ಲಿ ಮುಚ್ಚು ಹರಾಜುಕಟ್ಟೆ ನಿರ್ಮಾಣಕ್ಕೆ ಅಂದಾಜು ಮೊತ್ತ 50 ಲಕ್ಷ ರೂ. ಅದರ ಕಾಮಗಾರಿ ಪೂರ್ಣಗೊಂಡಿದೆ. ಕುಶಾಲನಗರ ಮಾರುಕಟ್ಟೆ ಪ್ರಾಂಗಣದಲ್ಲಿ 5 ಸಂಖ್ಯೆ ಮುಚ್ಚಿದ ಹರಾಜುಕಟ್ಟೆ ನಿರ್ಮಾಣಕ್ಕೆ ಅಂದಾಜು ಮೊತ್ತ 150 ಲಕ್ಷ, ತಗುಲಿದ ಖರ್ಚು 164.43 ಲಕ್ಷ ರೂ. ಕಾಮಗಾರಿ ಪೂರ್ಣಗೊಂಡಿದೆ. 2018-19 ನಬಾರ್ಡ್ ಸಂಸ್ಥೆಯ ಡಬ್ಲ್ಯೂ. ಐ.ಎಫ್ 2014-15 ಯೋಜನೆಯಡಿ ಸೋಮವಾರಪೇಟೆ ಸಮಿತಿಯ ಕುಶಾಲನಗರ ಮಾರುಕಟ್ಟೆ ಪ್ರಾಂಗಣದಲ್ಲಿ 4 ಸಂಖ್ಯೆ ಮುಚ್ಚು ಹರಾಜುಕಟ್ಟೆ ನಿರ್ಮಾಣಕ್ಕೆ ಅಂದಾಜು ಮೊತ್ತ 83.69 ಲಕ್ಷ ರೂ. ಕಾಮಗಾರಿ ಪೂರ್ಣಗೊಂಡಿರುತ್ತದೆ.

ನಬಾರ್ಡ್ ಸಂಸ್ಥೆಯ ಆರ್.ಐ.ಡಿ.ಎಫ್-24ರ ಯೋಜನೆ ಯಡಿ ಸೋಮವಾರಪೇಟೆ ಸಮಿತಿಯ ಕುಶಾಲನಗರ ಮಾರುಕಟ್ಟೆ ಪ್ರಾಂಗಣದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅಂದಾಜು ಮೊತ್ತ 50 ಲಕ್ಷ ರೂ. ತಗುಲಿದ ಖರ್ಚು 23.92 ಕಾಮಗಾರಿ ಪ್ರಗತಿ ಯಲ್ಲಿರುತ್ತದೆ. ನಬಾರ್ಡ್ ಸಂಸ್ಥೆಯ ಆರ್.ಐ.ಡಿ.ಎಫ್-24ರ ಯೋಜನೆಯಡಿ ಸೋಮವಾರ ಸಮಿತಿಯ ಕುಶಾಲನಗರ ಮಾರುಕಟ್ಟೆ ಪ್ರಾಂಗಣದಲ್ಲಿ ಶಾಪ್-ಕಂ-ಗೋದಾಮು ನಿರ್ಮಾಣಕ್ಕೆ ಅಂದಾಜು ಮೊತ್ತ 40 ಲಕ್ಷ ರೂ. ತಗುಲಿದ ಖರ್ಚು 19.90 ಲಕ್ಷ ರೂ. ಕಾಮಗಾರಿ ಪ್ರಗತಿಯಲ್ಲಿರುತ್ತದೆ.

2019-20ರಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ ಎಂದು ಉತ್ತರಿಸಿದರು. ಬಳಿಕ ಅಪ್ಪಚ್ಚು ರಂಜನ್ ರವರು ಸೋಮವಾರಪೇಟೆ,ಕುಶಾಲನಗರ ಮತ್ತು ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸಂತೆಯ ದಿನವೂ ಸೇರಿದಂತೆ ಉಳಿದ ಸಮಯದಲ್ಲೂ ಸಾಮಾನ್ಯ ಸಂತೆಯನ್ನು ನಡೆಸಲು ಅವಕಾಶ ನೀಡಿದಲ್ಲಿ, ಎಲ್ಲಾ ವರ್ಗದ ಜನರಿಗೆ ಅನುಕೂಲದ ಜೊತೆಗೆ ಸರ್ಕಾರಕ್ಕೆ ಆದಾಯ ಬರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಬಂದಿದ್ದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದರ ವಿವರ ನೀಡಬೇಕು ಎಂದು ಪ್ರಶ್ನಿಸಿದಾಗ, ಅದಕ್ಕೆ ಉತ್ತರಿಸಿದ ಸಚಿವರು, ಸಂತೆಯ ದಿನವೂ ಸೇರಿದಂತೆ ಉಳಿದ ಸಮಯದಲ್ಲೂ ಸಾಮಾನ್ಯ ಸಂತೆ ನಡೆಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಹೇಳಿದರು.