ಪಾಲಿಬೆಟ್ಟ, ಸೆ. 29: ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟಪರಂಬು ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನದ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
‘ವಿದ್ಯಾಗಮ’ ಕಲಿಕಾ ಕೇಂದ್ರದ ಮಾರ್ಗದರ್ಶಿ ಶಿಕ್ಷಕಿ ಎಂ.ಎಂ. ಸಲೀನ, ಅಂಗನವಾಡಿ ಸಹಾಯಕಿ ಸುಮಿತ್ರ, ಮಟ್ಟಪರಂಬು ಜನವಸತಿ ಪ್ರದೇಶದ ವಿದ್ಯಾಗಮ ಕೇಂದ್ರದ ವಿದ್ಯಾರ್ಥಿಗಳು, ಪೋಷಕ ವರ್ಗದವರು ಪಾಲ್ಗೊಂಡಿದ್ದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಕೀಲಾ ಭಾನು ಅವರು ಆರೋಗ್ಯ ಕಾಪಾಡುವಲ್ಲಿ ಸಮತೋಲನ ಆಹಾರದ ಮಹತ್ವದ ಕುರಿತು ಮಾತನಾಡಿದರು.