ಸುಂಟಿಕೊಪ್ಪ, ಸೆ. 30: ಮಾದಾಪುರದಲ್ಲಿ ಆಟೋರಿಕ್ಷಾ ನಿಲ್ದಾಣಕ್ಕೆ ಸೂಕ್ತ ಜಾಗವಿಲ್ಲದೆ ಸಮಸ್ಯೆ ತಲೆದೋರಿದ್ದು, ಶಾಸಕ ಅಪ್ಪಚ್ಚು ರಂಜನ್ ಅವರು ಸ್ಥಳ ಪರಿಶೀಲಿಸಿ ಪ್ರಾಯೋಗಿಕವಾಗಿ ಆಟೋ ನಿಲ್ಲಿಸಲು ಜಾಗ ಗುರುತಿಸಿದರು.

ಮಾದಾಪುರ ಪಟ್ಟಣದಲ್ಲಿ ಆಟೋ ರಿಕ್ಷಾ ನಿಲ್ದಾಣಕ್ಕೆ ಜಾಗವಿಲ್ಲದೆ ತೊಂದರೆ ಯಾಗಿದೆ ಎಂದು ಶಾಸಕರಿಗೆ ಆಟೋ ರಿಕ್ಷಾ ಮಾಲೀಕರು ಚಾಲಕರು ಮನವಿ ಸಲ್ಲಿಸಿದ ಮೇರೆಗೆ ಶಾಸಕ ರಂಜನ್ ಆಟೋರಿಕ್ಷಾ ಚಾಲಕರು, ಪೊಲೀಸರು, ಗ್ರಾ.ಪಂ.ಪಿಡಿಓ ಅವರೊಂದಿಗೆ ವಿವಿಧೆಡೆ ಆಟೋ ನಿಲ್ಧಾಣಕ್ಕೆ ಜಾಗ ಪರಿಶೀಲಿಸಿದರು. ಕೊನೆಗೆ ಎಲ್ಲರ ಒಮ್ಮತದ ತೀರ್ಮಾನದಂತೆ ಹಳೆ ಅಯ್ಯಪ್ಪ ದೇವಾಲಯದ ಕೆಳ ಭಾಗದ ರಸ್ತೆಯ ಎಡ ಬದಿಯಲ್ಲಿ ಈಗ ವಾಹನ ಗಳು ನಿಲ್ಲಿಸುವ ಜಾಗದಲ್ಲಿ ಪ್ರಾಯೋಗಿಕ ವಾಗಿ ಆಟೋ ನಿಲ್ದಾಣ ಮಾಡಲು ತೀರ್ಮಾನಿಸಿದ್ದು, ಸೂಕ್ತವಾದಲ್ಲಿ ಇದೇ ಜಾಗವನ್ನು ಆಟೋ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಲಾಯಿತು. ಈ ಸಂದರ್ಭ ಮಾದಾಪುರ ಗ್ರಾ. ಪಂ. ಪಿಡಿಓ ಪೂರ್ಣಕುಮಾರ್, ಮಾದಾಪುರ ಉಪಠಾಣೆಯ ಎಎಸ್‍ಐ ಪೊನ್ನಪ್ಪ, ಮುಖ್ಯಪೇದೆ ಸುರೇಶ, ಆಟೋರಿಕ್ಷಾ ಮಾಲೀಕ ಚಾಲಕರ ಸಂಘದ ಅಧ್ಯಕ್ಷ ಮೀನುಕೊಲ್ಲಿ ರಾಜ, ಆಟೋ ರಿಕ್ಷಾ ಚಾಲಕ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಮಾದಾಪುರ ಗ್ರಾ.ಪಂ. ಮಾಜಿ ಸದಸ್ಯ ನಾಪಂಡ ಉಮೇಶ, ಬಾಡಿಗೆ ಪಿಕ್‍ಆಪ್ ಮಾಲೀಕರುಗಳು,ಮತ್ತುಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.