ಮಡಿಕೇರಿ, ಸೆ. 30: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ 4 ಮಂದಿ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 40ಕ್ಕೇರಿದೆ. ವೀರಾಜಪೇಟೆ ತಾಲೂಕು ಅಂಬಟ್ಟಿ ಗ್ರಾಮದ ನಿವಾಸಿ 53 ವರ್ಷದ ಪುರುಷ, ವೀರಾಜಪೇಟೆಯ ನಗರ ನಿವಾಸಿ 80 ವರ್ಷದ ಮಹಿಳೆ, ಸೋಮವಾರಪೇಟೆ ಪಟ್ಟಣದ ನಿವಾಸಿ 63 ವರ್ಷದ ಪುರುಷ, ಕುಶಾಲನಗರ ಸೋಮೇಶ್ವರ ದೇವಸ್ಥಾನ ಬಳಿಯ ನಿವಾಸಿ 74 ವರ್ಷದ ಪುರುಷ ಮೃತರಾಗಿದ್ದಾರೆ. ಹೊಸದಾಗಿ 31 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2748 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 2275 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 433 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 89 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 61 ಮಂದಿ ಕೋವಿಡ್ ಕೇರ್ ಸೆಂಟರ್ನಲ್ಲಿ ಹಾಗೂ 283 ಮಂದಿ ಹೋಮ್ ಐಸೋಲೇಷನ್ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ 402 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಭಾಗಮಂಡಲ ಆಟೋ ನಿಲ್ದಾಣ ಸಮೀಪದ 10 ವರ್ಷದ ಬಾಲಕಿ ಮತ್ತು 30 ವರ್ಷದ ಮಹಿಳೆ, ಮಡಿಕೇರಿ ಐಟಿಐ ಜಂಕ್ಷನ್ ಹಿಂಭಾಗದ 23 ವರ್ಷದ ಪುರುಷ, ಸೋಮವಾರಪೇಟೆ ಗೌಡಳ್ಳಿಯ ಹೆಗ್ಗಳ ಗ್ರಾಮದ 34 ವರ್ಷದ ಪುರುಷ, ಮುಳ್ಳುಸೋಗೆ 1ನೇ ಬ್ಲಾಕ್ ನ ಸರ್ಕಾರಿ ಶಾಲೆ ಸಮೀಪದ 61 ವರ್ಷದ ಪುರುಷ, ಮುನಿಸಿಪಾಲ್ ಸಮೀಪದ 28 ವರ್ಷದ ಪುರುಷ, ಕೊಡ್ಲಿಪೇಟೆ ಕಾರಿಕೊಡ್ಲಿ ಮಠ ಸಮೀಪದ 26 ವರ್ಷದ ಪುರುಷ, ಕೊಡ್ಲಿಪೇಟೆ ವಿನಾಯಕ ವೃತ್ತ ಗಣಪತಿ ದೇವಾಲಯ ಎದುರಿನ 40 ವರ್ಷದ ಪುರುಷ ಮತ್ತು 39 ವರ್ಷದ ಮಹಿಳೆ, ಕುಶಾಲನಗರ ಅಳುವಾರ ಗಣಪತಿ ವೃತ್ತ ಸಮೀಪದ 31 ವರ್ಷದ ಪುರುಷ, ಕುಶಾಲನಗರ ಹೆಬ್ಬಾಲೆಯ ಕನಕ ಬ್ಲಾಕ್ ನ 75 ವರ್ಷದ ಮಹಿಳೆ, ಕುಶಾಲನಗರ ಮೂಡಲಕೊಪ್ಪಲುವಿನ 45 ವರ್ಷದ ಪುರುಷ, ಕುಶಾಲನಗರ ಶಿರಂಗಾಲ ಗೇಟ್ ಸಮೀಪದ 46 ವರ್ಷದ ಪುರುಷ, ಗರಗಂದೂರು ಪಂಚಾಯತಿ ಸಮೀಪದ 49 ವರ್ಷದ ಪುರುಷ ಮತ್ತು 43 ವರ್ಷದ ಮಹಿಳೆ, ಸೋಮವಾರಪೇಟೆ ತಣ್ಣೀರುಹಳ್ಳ ಗ್ರಾಮ ಮತ್ತು ಅಂಚೆಯ 60 ವರ್ಷದ ಪುರುಷ, ವೀರಾಜಪೇಟೆ ಕೈಕೇರಿ ಕ್ಯಾಂಡಲ್ ಕಾರ್ಖಾನೆ ಸಮೀಪದ 39 ವರ್ಷದ ಮಹಿಳೆ, ಭಾಗಮಂಡಲ ಎ.ಎನ್.ಎಫ್ ಕ್ಯಾಂಪ್ ಸಮೀಪದ 24 ವರ್ಷದ ಮಹಿಳೆ, ಕೊಡ್ಲಿಪೇಟೆ ಬ್ಯಾಡಗೊಟ್ಟ ಪಂಚಾಯತ್ ಕಚೇರಿ ಸಮೀಪದ 33 ವರ್ಷದ ಪುರುಷ, ಮಡಿಕೇರಿ ಮಂಗಳಾದೇವಿ ನಗರ ಅಂಗನವಾಡಿ ಸಮೀಪದ 53 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆ ಉಕ್ಕಡ ರಸ್ತೆಯ 42 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 46 ನತ್ತು 21 ವರ್ಷದ ಮಹಿಳೆಯರು, ಮಡಿಕೇರಿ ಚೈನ್ ಗೇಟ್ ವಸತಿಗೃಹದ 33 ವರ್ಷದ ಮಹಿಳೆ, ಸೋಮವಾರಪೇಟೆ ಕಾನ್ವೆಂಟ್ ಬಾಣೆಯ 28 ವರ್ಷದ ಪುರುಷ, ನಾಪೆÇೀಕ್ಲು ಬೇತು ಸರ್ಕಾರಿ ಶಾಲೆ ಸಮೀಪದ 44 ವರ್ಷದ ಪುರುಷ ಮತ್ತು 10 ವರ್ಷದ ಬಾಲಕಿ, ಕುಶಾಲನಗರ ಸರ್ಕಾರಿ ಆಸ್ಪತ್ರೆ ಸಮೀಪದ 74 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆ ಮಲಬಾರ್ ರಸ್ತೆಯ ಟಿಎಂಸಿ ವಸತಿಗೃಹದ 37 ವರ್ಷದ ಮಹಿಳೆ, 14 ವರ್ಷದ ಬಾಲಕಿ ಮತ್ತು 17 ವರ್ಷದ ಬಾಲಕನಿU ಸೋಂಕು ದೃಢಪಟ್ಟಿದೆ.