ಸುಂಟಿಕೊಪ್ಪ, ಅ. 12: ಎಮ್ಮೆಗುಂಡಿ ಪೂಜಾರಿ ಮನೆ ಮೋಹಿನಿಯವರ ಮನೆಯಿಂದ ಎಮ್ಮೆಗುಂಡಿ ರಾಮಯ್ಯ ಗೌಡರ ಮನೆಗೆ ತೆರಳುವ ರಸ್ತೆ ತೀರಾ ಹಾಳಾಗಿದ್ದು, ವಾಹನ ಸಂಚಾರಕ್ಕೆ ಹಾಗೂ ಶ್ರೀ ಸಾಮಾನ್ಯರು ನಡೆ ದಾಡಲು ಪ್ರಯಾಸ ಪಡಬೇಕಾಗಿದೆ.
ಬಾಡಿಗೆ ವಾಹನದವರು ಸಂಚರಿಸಲು ಹಿಂದೇಟು ಹಾಕು ತ್ತಿದ್ದಾರೆ. ಇದರಿಂದ ಎಮ್ಮೆಗುಂಡಿ ನೆಟ್ಲಿ ಬಿ. ಲೆಬ್ಬೆ ತೋಟ ನಾಕೂರು ಕಡೆಯಿಂದ ಸುಂಟಿಕೊಪ್ಪಕ್ಕೆ ಬರುವ ಗ್ರಾಮಸ್ಥರಿಗೆ ತೊಂದರೆ ಅನುಭವಿಸುವಂತಾಗಿದೆ. ಈ ಭಾಗದಲ್ಲಿ ಸುಮಾರು 12 ಕುಟುಂಬಗಳು ಕೃಷಿಕರಾಗಿದ್ದು, ನಿತ್ಯೋಪಯೋಗಿ ವಸ್ತುಗಳಿಗೆ ಸುಂಟಿಕೊಪ್ಪ ನಗರಕ್ಕೆ ಆಗಮಿಸ ಬೇಕಾದರೆ ಹದಗೆಟ್ಟ ರಸ್ತೆಯಲ್ಲಿ ನಡೆದಾಡಲು ಸಾದ್ಯವಾಗದಂತ ಪರಿಸ್ಥಿತಿಯಾಗಿದೆ ಎಂದು ಈ ಭಾಗದ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಆಸಕ್ತಿ ತೋರುತ್ತಿಲ್ಲ. ಮಳೆಗಾಲದಲ್ಲಿ ಈ ರಸ್ತೆ ಕೆಸರುಗದ್ದೆಯಾಗಿ ಮಾರ್ಪಾಡಾಗುತ್ತದೆ. ಶಾಲಾ ಮಕ್ಕಳು, ಸಾರ್ವಜನಿಕರು ಅನಾರೋಗ್ಯ ಪೀಡಿತರು ನಡೆದಾಡಲು ಸಾಧ್ಯವಾಗುತ್ತಿಲ್ಲ. ಆಟೋರಿಕ್ಷಾದವರು ಸಹ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹಲವಾರು ಕುಗ್ರಾಮಗಳ ರಸ್ತೆ ಉತ್ತಮಗೊಂಡರೂ ಎಮ್ಮೆ ಗುಂಡಿ-ಮಾದಾಪುರ ಸಂಪರ್ಕ ರಸ್ತೆ ಮಾತ್ರ ಶಾಪಗ್ರಸ್ತವಾಗಿದೆ. ಈ ಬೇಸಿಗೆಯಲ್ಲಿ ಯಾದರೂ ರಸ್ತೆ ಕಾಮಗಾರಿ ನಡೆಸಲು ಜನಪ್ರತಿನಿಧಿಗಳು ಮುಂದಾಗಲೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ ಬ್ರಿಟಿಷರ ಕಾಲದಲ್ಲಿ ಕಾಂಕ್ರಿಟ್ ರಸ್ತೆ ಯಾಗಿ ನಿರ್ಮಾಣವಾದ ಎಮ್ಮೆಗುಂಡಿ ರಸ್ತೆಯಲ್ಲಿ ವರ್ಷಂಪ್ರತಿ ವಯೋವೃದ್ಧರು, ಶಾಲಾ ಮಕ್ಕಳು, ಗ್ರಾಮಸ್ಥರು ಕೆಸರು ಮಯ ರಸ್ತೆಯಲ್ಲಿ ತೆರಳುವಂತಾಗಿದೆ. ಈ ರಸ್ತೆಯನ್ನು ಮರು ಡಾಮರೀ ಕರಣಗೊಳಿಸಲು ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.
- ರಾಜು ರೈ