ಮಡಿಕೇರಿ, ಅ. 12: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹೊರವಲಯದ ಶಾಂತಿನಗರದಲ್ಲಿ ತಾ. 8 ರಂದು ಕೊಲೆಗೀಡಾಗಿರುವ ಸಂಪತ್ ಕುಮಾರ್ ಹಂತಕರು ಇದೀಗ ಪೊಲೀಸರ ವಶವಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಅಲ್ಲದೆ ದುಷ್ಕøತ್ಯ ಎಸಗಿದ ಬಳಿಕ ತಲೆಮರೆಸಿ ಕೊಂಡಿದ್ದ ವೇಳೆ ಕೊಡಗಿನಲ್ಲಿ ಸುಳಿದಾಡಿರುವ ಹೆಜ್ಜೆ ಗುರುತು ಗೋಚರಿಸುವಂತಾಗಿದೆ ಎಂದು ಹೇಳಲಾಗುತ್ತಿದೆ.
ತಾ. 8 ರಂದು ಬೆಳ್ಳಂಬೆಳಿಗ್ಗೆ ಸಂಪತ್ನನ್ನು ಹತ್ಯೆಗೈದಿರುವ ಐವರು ಆರೋಪಿಗಳು, ದುಷ್ಕøತ್ಯಕ್ಕೆ ಬಳಸಿದ್ದ ವಾಹನವನ್ನು ಕಲ್ಲುಗುಂಡಿಯ ರಬ್ಬರ್ ತೋಟವೊಂದರಲ್ಲಿ ಅಡಗಿಸಿದ್ದಲ್ಲದೆ, ಬೇರೊಂದು ವಾಹನದಲ್ಲಿ ಯಾರ ಅರಿವಿಗೂ ಬಾರದಂತೆ ಭಾಗಮಂಡಲ ವ್ಯಾಪ್ತಿಯಲ್ಲಿ ಬಂದು ಅವಿತುಕೊಂಡಿದ್ದ ಮಾತು ಕೇಳಿ ಬರತೊಡಗಿದೆ.ಕೊಲೆಗೆ ಕಾರಣ: ಅಲ್ಲದೆ ವಾರದ ಹಿಂದೆ ಎಂದರೆ ಈ ದುಷ್ಕøತ್ಯ ಘಟಿಸುವ ಮೊದಲು ಕೊಲೆಗೀಡಾಗಿ ರುವ ಸಂಪತ್ ಹಾಗೂ ಆರೋಪಿ ಗಳಲ್ಲಿ ಒಬ್ಬನಾದ ಶಿಶಿರ್ ನಡುವೆ ಗಲಾಟೆ ನಡೆದಿದೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಅಲ್ಲದೆ ಪ್ರಮುಖ ಆರೋಪಿ ಎನ್ನಲಾದ ಮನು ಸಂಪತ್ ಬಳಿ ಆಗಿಂದಾಗ್ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡಲು ನಿರಾಕರಿಸುತ್ತಿದ್ದುದಾಗಿ ಜನವಲಯದಲ್ಲಿ ಅಭಿಪ್ರಾಯವಾಗಿದೆ.ಅಲ್ಲದೆ ಬಂಧಿತ ಆರೋಪಿ ಗಳಿಗೂ ಸಂಪತ್ಗೂ ಇದ್ದಂತಹ ಒಡನಾಟಕ್ಕೆ ಗಾಂಜಾ ಇತ್ಯಾದಿಯೂ ಸ್ಪರ್ಶವಿದ್ದು, ಒಂದೂವರೆ ವರ್ಷದ ಹಿಂದೆ ಘಟಿಸಿದ್ದ ಬಾಲಚಂದ್ರ ಕಳಗಿ ಸಾವಿನ ಪ್ರಕರಣ ಕೂಡ ತಳಕು ಹಾಕಿಕೊಳ್ಳಲು ಕಾರಣವಾಯಿತೆಂಬ ಟೀಕೆ ವ್ಯಕ್ತಗೊಳ್ಳತೊಡಗಿದೆ.
ಕೋವಿಯ ಕೈಗಳು?: ಮಾತ್ರವಲ್ಲದೆ ಮಾದಕ ವಸ್ತುಗಳ ಸೇವನೆಯ ಅಮಲಿನಲ್ಲಿ ಅನೇಕ ಸಲ ಸಂಪತ್ ಸಹಿತ ಈ ಆರೋಪಿಗಳು ಮಾತಿಗೆ ಮಾತು ಬೆಳೆದು ಬಡಿ ದಾಡಿಕೊಂಡಿ ರುವ ಆರೋಪವಿದೆ.
(ಮೊದಲ ಪುಟದಿಂದ) ಕಾಣದ ‘ಕೈ’ಗಳ ತನಿಖೆ: ಈ ಎಲ್ಲ ಅಂತೆಕಂತೆಗಳ ನಡುವೆ ಕೊಲೆ ಆರೋಪಿಗಳು ಬಳಸಿರುವ 3 ಕೋವಿಗಳ ಪೈಕಿ ಒಂದು ಸಂಪಾಜೆ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ. ಇನ್ನೆರಡು ಕೋವಿಗಳು ಕೊಡಗಿನ ಪರಿಚಿತರಿಂದ ಆರೋಪಿಗಳು ಪಡೆದಿರುವ ಶಂಕೆ ವ್ಯಕ್ತಗೊಂಡಿದೆ. ಅಲ್ಲದೆ ಸುಳ್ಯದ ಮೊಬೈಲ್ ಅಂಗಡಿ ಯೊಂದರಿಂದ ‘ಸಿಮ್’ ಮೂಲಕ ದುಷ್ಕøತ್ಯ ಬಳಿಕ ಬೇರೆ ಬೇರೆ ವ್ಯಕ್ತಿಗಳಿಗೆ ಸಂಪರ್ಕ ಸಾಧಿಸಿರುವ ಗುಮಾನಿ ಇದೆ.
ಹೀಗಾಗಿ ಓರ್ವ ಕೋವಿ ನೀಡಿದ ವ್ಯಕ್ತಿ, ಇನ್ನೋರ್ವ ವಾಹನ ಒದಗಿಸಿ ತಪ್ಪಿಸಿಕೊಳ್ಳಲು ಆರೋಪಿ ಗಳಿಗೆ ಸಹಕರಿಸಿರುವಾತ ಹಾಗೂ ಮೊಬೈಲ್ ಅಂಗಡಿಯಾತ ವಿಚಾರಣೆ ಎದುರಿಸುತ್ತಿದ್ದಾರೆ. ಇದರೊಂದಿಗೆ ಕೋವಿ ಸಂಬಂಧವೂ ತನಿಖೆ ನಡೆಯುತ್ತಿದೆ ಎಂದು ಸುಳ್ಯ ಪೊಲೀಸ್ ತನಿಖಾ ತಂಡ ಸುಳಿವು ನೀಡಿದೆ.