ವೀರಾಜಪೇಟೆ, ಅ. 12: ಹಿರಿಯ ನಾಗರಿಕರ ವೇದಿಕೆ ಮತ್ತು ವೀರಾಜಪೇಟೆ ಕಾನೂನು ಸಲಹೆಗಾರರ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣಿ ಪ್ರಯುಕ್ತ ‘ಬೇಡಿಕೆ ಮತ್ತು ಕಾನೂನು ಅರಿವು’ ಕಾರ್ಯಕ್ರಮ ತಾ. 15 ರಂದು ಬೆಳಿಗ್ಗೆ 10.30 ಗಂಟೆಗೆ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಪುರಭವನ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೂನ್ನಪ್ಪ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ಜಿ. ಲೋಕೇಶ ಉದ್ಘಾಟಿಸುವರು. ಸಲಹೆಗಾರರಾಗಿ ಕಿರಿಯ ನ್ಯಾಯ ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ. ಕೋನಪ್ಪ ಹಾಗೂ ಸಿವಿಲ್ ಅಪರ ನ್ಯಾಯಾಧೀಶೆ ಮಹಾಲಕ್ಷ್ಮಿ ಭಾಗವಹಿಸುವರು. ಅತಿಥಿಗಳಾಗಿ ವಕೀಲರ ಸಂಘದ ವೀರಾಜಪೇಟೆಯ ಅಧ್ಯಕ್ಷ ಮಾಳೇಟಿರ ಎಂ. ನಂಜಪ್ಪ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ, ತಾಲೂಕು ತಹಿಶೀಲ್ದಾರ್ ಎಲ್.ಎಂ. ನಂದೀಶ್, ಲೋಕೋಪಯೋಗಿ ಇಲಾಖೆಯ ಕಿರಿಯ ಸಹಾಯಕ ಅಭಿಯಂತರ ಎಂ.ಇ. ಸುರೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ, ಹಿರಿಯ ನಾಗರಿಕರಾದ ನಾಯಡ ವಾಸು ನಂಜಪ್ಪ, ಪುಟ್ಟಿಚಂಡ ಅಯ್ಯಣ್ಣ ಹಾಗೂ ಕೂತಂಡ ಕೆ. ನಾಣಯ್ಯ ಭಾಗವಹಿಸುವರು.