ಮಡಿಕೇರಿ, ಅ. 13: ಸುಳ್ಯದ ಶಾಂತಿ ನಗರದಲ್ಲಿ ತಾ.8ರಂದು ಬೆಳ್ಳಂಬೆಳಿಗ್ಗೆ ನಡೆದ ಕಲ್ಲುಗುಂಡಿಯ ಸಂಪತ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೆÇಲೀಸ್ ಬಂಧನದಲ್ಲಿದ್ದ ಪ್ರಮುಖ ನಾಲ್ವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವದರೊಂದಿಗೆ ಹೆಚ್ಚಿನ ವಿಚಾರಣೆಗಾಗಿ ಪೆÇಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇನ್ನು ಕೊಡಗಿನ ಮೊಣ್ಣಂಗೇರಿಯ ಜೀಪು ಚಾಲಕ ಡಿಂಪಲ್ ಹಾಗೂ ಸಂಪಾಜೆಯ ವರ್ತಕ ರವೀಂದ್ರ, ಕಲ್ಲುಗುಂಡಿಯ ರಾಜೇಶ್ ಹಾಗೂ ಸುಳ್ಯದ ಶಿಶಿರ್ ಈ ನಾಲ್ವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.ದುಷ್ಕøತ್ಯದ ಪ್ರಮುಖ ಆರೋಪಿ ಕಲ್ಲುಗುಂಡಿಯ ಮನು ಅಲಿಯಾಸ್ ಮನೋಹರ, ಬಿಪಿನ್, ಮಧು ಅಲಿಯಾಸ್ ಮನೋಜ್, ಕಾರ್ತಿಕ್ ಈ ನಾಲ್ವರನ್ನು ಹೆಚ್ಚಿನ ವಿಚಾರಣೆಗಾಗಿ ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಲೆಯ ಬಳಿಕ ಆರೋಪಿಗಳು ತಪ್ಪಿಸಿಕೊಳ್ಳಲು ಕಲ್ಲುಗುಂಡಿಯ ರಾಜೇಶ್ ವಾಹನವನ್ನು ಒದಗಿಸಿದ್ದರು. ಸಂಪಾಜೆಯ ರವೀಂದ್ರ ಹಾಗೂ ಮೊಣ್ಣಂಗೇರಿಯ ಡಿಂಪಲ್ ದುಷ್ಕøತ್ಯ ನಡೆಸಲು ಕೋವಿಗಳನ್ನು ನೀಡಿದ್ದರು. ಈ ಸಂಬಂಧ ಇವರುಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಕೊಲೆ ಆರೋಪಿಗಳಲ್ಲಿ ಒಬ್ಬನಾಗಿದ್ದ ಶಿಶಿರ್ ಮೇಲೆ ಕೆಲವು ದಿನಗಳ ಹಿಂದೆ ಸಂಪತ್ ಕುಮಾರ್ ಹಲ್ಲೆ ನಡೆಸಿದ್ದರಿಂದ ಕೊಲೆಗೆ ಸಂಚು ರೂಪಿಸಿರುವ ಆರೋಪ ಜನವಲಯದಲ್ಲಿ ಕೇಳಿಬಂದಿದೆ.