ಜಿಲ್ಲೆಯಲ್ಲಿ ಕೋವಿಡ್ ಸಂಬಂಧ 3 ಸಾವು ವರದಿಯಾಗಿದೆ.

ಕುಶಾಲನಗರದ ದಂಡಿನಪೇಟೆಯ 60 ವರ್ಷದ ಪುರುಷ, ವೀರಾಜಪೇಟೆ ನಗರದ ಅಪ್ಪಯ್ಯಸ್ವಾಮಿ ಲೇಔಟ್ ನ 64 ವರ್ಷದ ಮಹಿಳೆ, ಗುಡ್ಡೆಹೊಸೂರು ನಿವಾಸಿ 82 ವರ್ಷದ ಪುರುಷರೊಬ್ಬರು ಮೃತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 59 ಕ್ಕೇರಿದೆ.

ಜಿಲ್ಲೆಯಲ್ಲಿ ಹೊಸದಾಗಿ108 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3862 ಪ್ರಕರಣಗಳು ವರದಿಯಾಗಿದ್ದು, 3223 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 59 ಮಂದಿ ಸಾವನ್ನಪ್ಪಿದ್ದು 580 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 104 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 39 ಮಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿ, 437 ಮಂದಿ ಹೋಮ್ ಐಸೋಲೇಷನ್ ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 613 ನಿಯಂತ್ರಿತ ವಲಯಗಳಿವೆ.