ಸುಂಟಿಕೊಪ್ಪ, ಅ. 13: ಸುಂಟಿಕೊಪ್ಪದಲ್ಲಿರುವ ವಿಕಾಸ ಜನಸೇವಾ ವೃದ್ಧಾಶ್ರಮದಲ್ಲಿರುವವರಿಗೆ ಕುಶಾಲನಗರ ರೋಟರಿ ವತಿಯಿಂದ ಟೆಲಿವಿಷನ್, ಟೇಬಲ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಉಪಹಾರ ನೀಡಲಾಯಿತು.
ರೋಟರಿ ಜಿಲ್ಲಾ ಗವರ್ನರ್ ರಂಗನಾಥ ಭಟ್ ಮಾತನಾಡಿ. ಅನಾಥ ವೃದ್ಧರಿಗೆ ಸಹಾಯ ಮಾಡುವ ರೋಟರಿ ಕುಶಾಲನಗರದ ಕಾರ್ಯವನ್ನು ಶ್ಲಾಘಿಸಿದರು. ಅಧ್ಯಕ್ಷ ಚಂದ್ರಶೇಖರ ವೃದ್ಧರನ್ನು ತಮ್ಮ ಕುಟಂಬದಲ್ಲಿ ಒಬ್ಬರಂತೆ ನೋಡಿಕೊಳ್ಳುತ್ತಿರುವ ಟ್ರಸ್ಟ್ನ ಅಧ್ಯಕ್ಷ ರಮೇಶ್ ಹಾಗೂ ಅವರ ಪತ್ನಿಯ ಕಾರ್ಯವನ್ನು ಶ್ಲಾಘಿಸಿದರು. ರೋಟರಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರವನ್ನು ನೀಡುತ್ತದೆ ಎಂದು ಹೇಳಿದರು. ರಂಗಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಕಾರ್ಯದರ್ಶಿ ಉಲ್ಲಾಸ ಕೃಷ್ಣ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ವಿಕ್ರಂದತ್ತ, ಪೆಮ್ಮಯ್ಯ, ಅಶೋಕ, ಸಂಜು, ಬೆಳ್ಳಿಯಪ್ಪ, ಜೇಕಬ್ ಹಾಗೂ ರವಿ ಹಾಜರಿದ್ದರು.