ಗೋಣಿಕೊಪ್ಪಲು, ಅ. 13: ರೈತ ಹೋರಾಟಗಾರರ ಹಸಿರು ಶಾಲಿಗೆ ಅಗೌರವ ತೋರದಿರಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದರು.

ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಸಭಾಂಗಣದಲ್ಲಿ ದಕ್ಷಿಣ ಕೊಡಗಿನ ವಿವಿಧ ಭಾಗದ ರೈತ ಸಂಘದ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಸಿರು ಶಾಲಿನ ಮಹತ್ವ ತಿಳಿದವರು ಎಂದಿಗೂ ಹಸಿರು ಶಾಲಿಗೆ ಅಗೌರವ ತೋರು ವುದಿಲ್ಲ. ರೈತ ಹೋರಾಟಗಾರರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ರೈತ ಸಂಘವನ್ನು ರಾಜ್ಯ ಮಟ್ಟದಲ್ಲಿ ಕಟ್ಟಿ ಬೆಳೆಸಿದ್ದಾರೆ. ಇದನ್ನು ನಾವು ಮುಂದುವರೆಸುತ್ತಿದ್ದೇವೆ. ಮುಂದೆ ಕಾರ್ಯಕರ್ತರು ಹಸಿರು ಶಾಲಿನ ಮೌಲ್ಯವನ್ನು ಕಾಪಾಡಬೇಕೆಂದರು.

ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಮಾತನಾಡಿ, ರೈತರ ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆಹರಿಸುವುದೇ ರೈತ ಸಂಘದ ಮೂಲ ಉದ್ದೇಶ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರ ಹೋರಾಟಗಳನ್ನು ಕೆಲವರು ಕೊಂಕು ಮಾತಿನಿಂದ ಟೀಕಿಸುತ್ತಿದ್ದಾರೆ. ಇದರಿಂದ ರೈತ ಸಂಘದ ಹೋರಾಟಕ್ಕೆ ಯಾವುದೇ ಅಡೆತಡೆಯಿಲ್ಲ ಎಂದರು.

ರೈತ ಮುಖಂಡರಾದ ಟಿ. ಶೆಟ್ಟಿಗೇರಿಯ ಅಪ್ಪಚಂಗಡ ಮೋಟಯ್ಯ ಮಾತನಾಡಿ, ರೈತರ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ದೇವರಪುರ, ಬಲ್ಯಮುಂಡೂರು, ಕುಂದ, ಪೊನ್ನಂಪೇಟೆ, ಅರುವತೊಕ್ಲು ಸೇರಿದಂತೆ ವಿವಿಧ ಭಾಗದಿಂದ ರೈತರು ರೈತ ಸಂಘಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್, ಶ್ರೀಮಂಗಲ ಹೋಬಳಿ ಸಂಚಾಲಕ ಚೆಟ್ಟಂಗಡ ಕಂಬ ಕಾರ್ಯಪ್ಪ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೆಪಂಡ ಪ್ರವೀಣ್, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ನಲ್ಲೂರು ಅಧ್ಯಕ್ಷ ತೀತರಮಾಡ ರಾಜ,ರೈತ ಮುಖಂಡರಾದ ಅರುವತೊಕ್ಲುವಿನ ಕಾಡ್ಯಮಾಡ ಮೋತಿ ಅಪ್ಪಚ್ಚು, ಕಾಡ್ಯಮಾಡ ಪ್ರೀತ್ ಪೂವಣ್ಣ, ಕಾಡ್ಯಮಾಡ ಜೀವನ್, ಕಾಡ್ಯಮಾಡ ಅಶೋಕ್, ಕಾಡ್ಯಮಾಡ ದೇವಯ್ಯ, ಮಲ್ಲಮಾಡ ಸುನೀಲ್, ಮಚ್ಚಮಾಡ ಕಿರಣ್ ಗಣಪತಿ, ದೇವರಪುರದ ಅಚ್ಚೆಯಂಡ ಟಿಟ್ಟು ಗಣಪತಿ, ಬೆಕ್ಕೆಸೊಡ್ಲೂರುವಿನ ಮಲ್ಲಮಾಡ ಅರುಣ್, ಗುಡಿಯಂಗಡ ಗಿರೀಶ್, ಕಿರುಗೂರಿನ ಗಾಡಂಗಡ ಉತ್ತಯ್ಯ, ಚೆಪ್ಪುಡೀರ ಕುಟ್ಟಪ್ಪ, ಕೋದೆಂಗಡ ಸುರೇಶ್ ಚಂಗಪ್ಪ, ಮುಕ್ಕಾಟಿರ ದಿವ್ಯ, ಮುಂಡುಮಾಡ ಕಮಲ, ಬೊಳ್ಳಿಮಾಡ ಲಾಲಿ, ಚೋನಿರ ಗೌರಮ್ಮ ಮುಂತಾದದವರು ಭಾಗವಹಿಸಿದ್ದರು. ಕಾರ್ಯದರ್ಶಿ ಸುಜಯ್ ಬೋಪಯ್ಯ ಸ್ವಾಗತಿಸಿ, ಅಪ್ಪಚಂಗಡ ಮೋಟಯ್ಯ ವಂದಿಸಿದರು.