ಬಾಳೆಲೆ, ಅ. 13: ಬಾಳೆಲೆ ವ್ಯಾಪ್ತಿಯ ನಿಟ್ಟೂರು-ಕಾರ್ಮಾಡು ಗ್ರಾಮದಲ್ಲಿ ಕಳೆದ ರಾತ್ರಿ ಹುಲಿಯೊಂದು ಓಡಾಡಿರುವ ಹೆಜ್ಜೆ ಗುರುತು ಗೋಚರವಾಗಿದೆ. ಅಲ್ಲಿನ ಶ್ರೀ ಕಾಲಭೈರವ ದೇವಸ್ಥಾನದ ಅಕ್ಕಪಕ್ಕದ ತೋಟದಲ್ಲಿ ಹೆಜ್ಜೆ ಗುರುತು ಕಂಡುಬಂದಿದ್ದು, ಜನತೆಯಲ್ಲಿ ಆತಂಕ ಮೂಡಿದೆ.ಈ ವ್ಯಾಪ್ತಿಯಲ್ಲಿ ಪದೇ ಪದೇ ಹುಲಿ ದಾಳಿಯಂತಹ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಈ ಬಗ್ಗೆ ಮುನ್ನೆಚ್ಚರಿಗೆ ವಹಿಸಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಅರಣ್ಯ ಇಲಾಖೆಯೂ ನಿಗಾವಹಿಸಬೇಕೆಂದು ಆಗ್ರಹಿಸಿದ್ದಾರೆ.(ಮೊದಲ ಪುಟದಿಂದ) ಹುಲಿ ದಾಳಿಗೆ ಹಸು ಬಲಿ
*ಗೋಣಿಕೊಪ್ಪಲು : ಬಾಳೆಲೆ ದೇವನೂರು ರಾಜಾಪುರದ ಮುಕ್ಕಾಟೀರ ಎಂ. ಕುಶಾಲಪ್ಪ ಅವರಿಗೆ ಸೇರಿದ ಹಸುವನ್ನು ಹುಲಿ ದಾಳಿ ನಡೆಸಿ ಕೊಂದುಹಾಕಿದೆ. ಸೋಮವಾರ ರಾತ್ರಿ ಹಸುವನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿತ್ತು. ಮಧ್ಯರಾತ್ರಿ ಕೊಟ್ಟಿಗೆ ನುಗ್ಗಿರುವ ಹುಲಿ ಕಟ್ಟಿ ಹಾಕಿದ್ದ ಹಸುವಿನ ಹಗ್ಗ ಕಿತ್ತು ಸುಮಾರು 100 ಮೀಟರ್ ದೂರ ಎಳೆದೊಯ್ದಿದೆ. ಬಳಿಕ ಕುತ್ತಿಗೆ ಕಚ್ಚಿ ಸಾಯಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹುಲಿ ಹೆಜ್ಜೆ ಪತ್ತೆ
ಚೆಟ್ಟಳಿ : ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೈತನ್ಯ ಎಸ್ಟೇಟ್ನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಕಾರ್ಮಿಕರು ಬೆಳಿಗ್ಗೆ ಕಾಫಿ ತೋಟದೊಳಗೆ ಹುಲಿ ಹೆಜ್ಜೆಯನ್ನು ಕಂಡಿರುವ ಬಗ್ಗೆ ತಿಳಿಸಿದ್ದು, ಅರಣ್ಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.