ನಾಪೆÇೀಕ್ಲು, ಅ. 14: ನಾಪೆÇೀಕ್ಲು ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳಲ್ಲಿ ಬಿರುಸಿನ ಗಾಳಿ, ಮಳೆ ಸುರಿಯಲಾರಂಭಿಸಿದೆ. ಈ ಮಳೆಯ ಕಾರಣದಿಂದ ಹಳ್ಳ ಕೊಳ್ಳ, ನದಿ, ಹೊಳೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಹರಿಯುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಮತ್ತೆ ಪ್ರವಾಹ ಉಂಟಾಗುವ ಭೀತಿ ಏರ್ಪಟ್ಟಿದೆ.

ಮೂರನೇ ಬಾರಿಗೆ ಮುಳುಗಡೆ : ಇತ್ತೀಚಿನ ವರ್ಷಗಳಲ್ಲಿ ಲಾಭವಿಲ್ಲ ಎಂಬ ಕಾರಣಕ್ಕಾಗಿ ಭತ್ತದ ಕೃಷಿ ಮಾಡುವ ರೈತರು ವಿರಳವಾಗಿದ್ದಾರೆ. ಆದರೂ ಸಾಂಪ್ರದಾಯಿಕ ಕೃಷಿಯನ್ನು ಕೈಬಿಡಬಾರದೆಂಬ ನಿಟ್ಟಿನಲ್ಲಿ ಹಲವು ರೈತರು ಕಷ್ಟಪಟ್ಟು ಭತ್ತದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ, ಈ ವರ್ಷ ಸುರಿದ ಭಾರೀ ಮಳೆಯ ಪರಿಣಾಮದಿಂದ ಎರಡು ಬಾರಿ ನಾಟಿ ಮಾಡಿದ ಭತ್ತದ ಗದ್ದೆಗಳು ಜಲಾವೃತಗೊಂಡು ನಷ್ಟ ಸಂಭವಿಸಿದೆ. ಈ ಮಳೆಯು ಹೀಗೆ ಮುಂದುವರಿದರೆ ಮೂರನೇ ಬಾರಿಗೆ ಭತ್ತದ ಗದ್ದೆಗಳು ಜಲಾವೃತಗೊಳ್ಳುವ ಭೀತಿ ಉಂಟಾಗಿದೆ.

ಸಂಕಷ್ಟದಲ್ಲಿ ಕಾಫಿ ಬೆಳೆಗಾರರು : ಕಳೆದ ವಾರದ ಆರಂಭದಲ್ಲಿ ತುಂತುರು ಮಳೆ ಆರಂಭಗೊಂಡಾಗ ಕಾಫಿ ಬೆಳೆಗಾರರು ತೋಟಗಳಿಗೆ ರಸಗೊಬ್ಬರ ನೀಡುವ ಕೆಲಸವನ್ನು ಬಿರುಸಿನಿಂದ ಕೈಗೊಂಡಿದ್ದರು. ಮಳೆಯು ಕೂಡ ರಸಗೊಬ್ಬರ ನೀಡಲು ಸರಿಯಾಗಿ ಸುರಿಯುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿರುವದರಿಂದ ಹಾಗೂ ದಿನವಿಡೀ ಬಿಸಿಲು ಕಂಡು ಬಾರದ ಕಾರಣ ಮೂರನೇ ಬಾರಿಗೆ ಕಾಫಿ, ಕಾಳುಮೆಣಸು ಮತ್ತು ಅಡಿಕೆ ಬೆಳೆಗಳಲ್ಲಿ ಕೊಳೆರೋಗ ಕಂಡು ಬಂದಿದ್ದು, ಕಾಫಿ ಬೆಳೆಗಾರರು ಆತಂಕದ ಸ್ಥಿತಿ ಎದುರಿಸುವಂತಾಗಿದೆ. ಈ ಮಳೆ ಇದೇ ರೀತಿ ಮುಂದುವರಿದರೆ, ಹೆಚ್ಚಿನ ನಷ್ಟ ಉಂಟಾಗಬಹುದು ಎಂಬದು ಬೆಳೆಗಾರರ ಆತಂಕ.

ಕೊಳೆಯುತ್ತಿರುವ ಅರೇಬಿಕಾ : ಅಕಾಲಿಕ ಮಳೆ ಮತ್ತಿತರ ಕಾರಣಗಳಿಂದ ಸೆಪ್ಟೆಂಬರ್ ತಿಂಗಳ ಕೊನೆ ವಾರದಲ್ಲಿಯೇ ಬೆಳೆಗಾರರು ಆಂತರಿಕ ಬೆಳೆಯಾಗಿ ಬೆಳೆಯುತ್ತಿರುವ ಅರೇಬಿಕಾ, ಕಾವೇರಿ, ಕಟುವಾಯಿ ಕಾಫಿಗಳು ಹಣ್ಣಾಗುತ್ತಿವೆ. ಆದರೆ, ಮಳೆಯ ಕಾರಣದಿಂದ ಅದನ್ನು ಕುಯ್ಲು ಮಾಡಲಾಗದೇ ಕಾಫಿ ಹಣ್ಣುಗಳು ಒಡೆದು ನೆಲಕಚ್ಚುತ್ತಿವೆ. ಅದರೊಂದಿಗೆ ಪಕ್ಷಿಗಳು, ಇಲಿಗಳು ಕೂಡ ಕಾಫಿ ಫಸಲನ್ನು ತಿಂದು ಹಾಳುಗೆಡವುತ್ತಿವೆ. ಈ ಮಳೆ ನಿಲ್ಲದೆ ಇದೇ ರೀತಿ ಮುಂದುವರಿದರೆ ಅರೇಬಿಕಾ, ಕಾವೇರಿ ಕಾಫಿಯ ಆಸೆಯನ್ನು ಈ ವ್ಯಾಪ್ತಿಯ ಜನ ಬಿಡಬೇಕಾಗುತ್ತದೆ ಎನ್ನುತ್ತಾರೆ ಈ ವ್ಯಾಪ್ತಿಯ ಬೆಳೆಗಾರರು.

-ಪಿ.ವಿ. ಪ್ರಭಾಕರ್