ಪೆರಾಜೆ, ಅ. 14: ಭೂಮಿಯನ್ನು ಉಪವಾಸ ಹಾಕದೆ ಚೆನ್ನಾಗಿ ನೋಡಿ ಕೊಂಡಾಗ ಭೂಮಿ ಎಂದಿಗೂ ಮೋಸ ಮಾಡುವುದಿಲ್ಲ. ಪರಿಸರ, ಪ್ರಕೃತಿ, ಪಶು ಇವುಗಳ ಮದ್ಯೆ ಅವಿನಾಭಾವ ಸಂಬಂಧವಿದೆ, ಕೃಷಿ ಜೀವನದಲ್ಲಿ ಇವುಗಳನ್ನು ಗೌರವಿಸಿದಲ್ಲಿ ರೈತ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಕೊಡಗು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅಭಿಪ್ರಾಯ ಪಟ್ಟರು. ಪೆರಾಜೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ರೈತಮೋರ್ಚದ ಸಭೆಯಲ್ಲಿ ಮಾತನಾಡುತ್ತಾ ಅವರು ಕೇಂದ್ರ ಸರ್ಕಾರವು ಕೃಷಿಯ ಸುಧಾರಣೆಯ ದೃಷ್ಟಿಯಿಂದ ಮಂಡಿಸಿದ ಮೂರು ಮಸೂದೆಗಳು ರೈತರಿಗೆ ನೆರವಾಗಲಿದೆ ಎಂದರು.
ಹೈನುಗಾರಿಕೆ, ಕುರಿ, ಮೆಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬು ಗಳಲ್ಲಿ ಯುವಕ, ಯುವತಿಯರು ತೊಡಗಿಸಿಕೊಳ್ಳಲು ವಿಪುಲ ಅವಕಾಶಗಳಿವೆ ಇದರಿಂದ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ರೈತರಿಗೆ ಲಾಭದಾಯಕವಾಗಿದೆ ಎಂದರು.
ಈ ಸಂದರ್ಭ ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ, ಶಕ್ತಿ ಕೇಂದ್ರದ ಸಹಪ್ರಮುಖ್ ಚಿನ್ನಪ್ಪ ಅಡ್ಕ, ಮಡಿಕೇರಿ ತಾಲೂಕು ಭಾ.ಜ.ಪಾ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಪದಾಧಿಕಾರಿಗಳಾದ ಧನಂಜಯ ಕೋಡಿ,ಜಿಲ್ಲಾ ಸಲಹಾ ಸಮಿತಿಯ ಸದಸ್ಯ ಅಮೆಚೂರ್ ಹೊನ್ನಪ್ಪ ಸೇರಿದಂತೆ ವಿವಿಧ ಮೋರ್ಚಾದ ಪದಾಧಿಕಾರಿಗಳು, ಮಾಜಿ ಜನಪ್ರತಿ ನಿಧಿಗಳು, ಪ್ರಾ.ಕೃ.ಪ. ಸ.ಸಂಘದ ನಿರ್ದೇಶಕರುಗಳು ಊರಿನ ಕೃಷಿಕರು ಉಪಸ್ಥಿತರಿದ್ದರು.