ಸಿದ್ದಾಪುರ, ಅ. 14: ಖಾಸಗಿ ಸಂಸ್ಥೆಯ ಮೊಬೈಲ್ ಟವರ್ ಅಳವಡಿಸುವ ಕಾಮಗಾರಿಗೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ವೀರಾಜಪೇಟೆ ರಸ್ತೆ ಸಮೀಪದ ಶಾಲೆ ಮುಂಭಾಗದಲ್ಲಿ ಇರುವ ಖಾಸಗಿ ಜಾಗದಲ್ಲಿ ಖಾಸಗಿ ಮೊಬೈಲ್ ಸಂಸ್ಥೆಗೆ ಸೇರಿದ ಮೊಬೈಲ್ ಟವರ್ ಅಳವಡಿಸಲು ಕಾಮಗಾರಿ ನಡೆಸಲಾಗುತ್ತಿದೆ. ಅಲ್ಲದೆ ಆ ಭಾಗದಲ್ಲಿ ವಾಸಮಾಡುತ್ತಿರುವ ನಿವಾಸಿಗಳು ತೆರಳುತ್ತಿರುವ ರಸ್ತೆಗಳನ್ನು ಜೆಸಿಬಿ ಬಳಸಿ ಹಾನಿಗೊಳಿಸಿರುವುದಾಗಿ ನಿವಾಸಿಗಳು ಆರೋಪಿಸಿದ್ದಾರೆ.

ಈ ಪ್ರದೇಶದಲ್ಲಿ ಹಲವಾರು ಕುಟುಂಬಗಳು ವಾಸಮಾಡಿಕೊಂಡಿದ್ದಾರೆ. ಸಮೀಪದಲ್ಲೇ ಶಾಲೆಗಳು ಇದ್ದು ಇದರಿಂದಾಗಿ ಸಮಸ್ಯೆಗಳು ಎದುರಾಗುತ್ತಿದೆ ಎಂದು ನಿವಾಸಿಗಳು ದೂರಿದರು. ಕೂಡಲೇ ಟವರ್ ಕಾಮಗಾರಿಯನ್ನು ಕೈಬಿಡಬೇಕೆಂದು ನಿವಾಸಿಗಳಾದ ಮುಜೀಬ್, ಸರ್ಫು, ರಮೇಶ, ಜಾನ್ಸನ್, ರಶೀದ್, ಪಿ.ಎಚ್ ಹಮೀದ್ ಇನ್ನಿತರರು ಒತ್ತಾಯಿಸಿದ್ದಾರೆ.