ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಹೋಂಸ್ಟೇ, ರೆಸಾರ್ಟ್, ಹೊಟೇಲ್ಗಳಿಗೂ ಹಲವು ಸೂಚನೆಗಳನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. * ಪ್ರವೇಶ ದ್ವಾರದಲ್ಲಿ ಸ್ಟಾಂಡ್ ಸ್ಯಾನಿಟೈಸರ್ ಇತರೆ ಸ್ಥಳಗಳಲ್ಲಿ (ಕೊಠಡಿ, ಶೌಚಾಲಯ, ರೆಸ್ಟೋರೆಂಟ್ ಹಾಗೂ ಇತರ) ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಕಡ್ಡಾಯವಾಗಿ ಮಾಸ್ಕ್ ಅಥವಾ ಮುಖಗವಸು ಬಳಸಬೇಕು. ಸಾಧ್ಯವಾದಷ್ಟು ವಿವಿಧ ಮಾದರಿಯಲ್ಲಿ ಇ-ಪೇಮೆಂಟ್ ಮೂಲಕ ವ್ಯವಹಾರ ನಡೆಸಬೇಕು.ಥರ್ಮಲ್ ಪರೀಕ್ಷೆ (ಉಷ್ಣ ಪರೀಕ್ಷೆ) ನಡೆಸಬೇಕುಕೋವಿಡ್ -19ಗೆ ಸಂಬಂಧಿಸಿದಂತೆ ಪ್ರವಾಸಿಗರಿಗೆ, ಅತಿಥಿ ಗಳಿಗೆ ಸೂಕ್ತ ನಿರ್ದೇಶನ ನೀಡುತ್ತಿರುವ ಬಗ್ಗೆ ಫಲಕ ಅಳವಡಿಸಬೇಕು.ವಾಸ್ತವ್ಯ ಹೂಡಿರುವ ಪ್ರವಾಸಿಗರು, ಅತಿಥಿಗಳಿಗೆ ಪ್ರಯಾಣ ಹಿನ್ನೆಲೆಯ ಮಾಹಿತಿ, ಯಾವುದಾದರೂ ಗುರುತಿನ ದಾಖಲಾತಿಗಳನ್ನು ಪಡೆಯಬೇಕು.ಹೋಂಸ್ಟೇ - ರೆಸಾರ್ಟ್, ಹೊಟೇಲ್ಗಳಿಗೆ ಸೂಚನೆ (ಮೊದಲ ಪುಟದಿಂದ) ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಸಿಬ್ಬಂದಿಗಳು ಕೋವಿಡ್ -19ಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳಾದ ಕೈಗವಸು, ಮುಖಗವಸು ಮತ್ತು ಶುಚಿತ್ವ ಕಾಪಾಡಿಕೊಳ್ಳಬೇಕು.
* ಅತಿಥಿಗಳು ಹಾಗೂ ಪ್ರವಾಸಿಗರ ಲಗೇಜುಗಳನ್ನು ಸ್ಯಾನಿಟೈಸ್ ಮಾಡಬೇಕು. ಒಂದು ಕೊಠಡಿಯಲ್ಲಿ ಇಬ್ಬರು ಅತಿಥಿಗಳಿಗೆ ಮಾತ್ರ ವಾಸ್ತವ್ಯ ಹೂಡಲು ಅವಕಾಶ ನೀಡಬೇಕು.
* ನಾಲ್ಕು ಮಂದಿಗಿಂತ ಹೆಚ್ಚು ಮಂದಿ, ಪ್ರವಾಸಿಗರು, ಸಾರ್ವಜನಿಕರು ಪ್ರವಾಸಿ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಇತರೆಡೆಗಳಲ್ಲಿ ಒಂದೆಡೆ ಸೇರುವಂತಿಲ್ಲ
* ರೆಸ್ಟೋರೆಂಟ್, ಹೊಟೇಲ್ಗಳಲ್ಲಿ ಒಂದು ಟೇಬಲ್ನಿಂದ ಮತ್ತೊಂದು ಟೇಬಲ್ಗೆ ಕನಿಷ್ಟ 6 ಅಡಿ ಅಂತರವಿರಬೇಕು ಹಾಗೂ ಒಂದು ಟೇಬಲ್ನಲ್ಲಿ ನಾಲ್ಕು ಮಂದಿಗೆ ಮಾತ್ರ ಅವಕಾಶ ನೀಡಬೇಕು.
* ಹಿರಿಯ ನಾಗರಿಕರು ಗರ್ಭಿಣಿಯರು ಮತ್ತು ಮಕ್ಕಳ ನಾಡಿ ಮಿಡಿತವನ್ನು (Puಟse ಔximeಣeಡಿ) ಮೂಲಕ ಪರೀಕ್ಷಿಸಬೇಕು ಎಂದು ಸೂಚಿಸಲಾಗಿದೆ.