ಮಡಿಕೇರಿ, ಅ. 15: ಮೂರ್ನಾಡು ಹೋಬಳಿ ಘಟಕದ ಬಂಟರ ಸಂಘದ ವತಿಯಿಂದ ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರಾಗಿ ಜಯರಾಂ ರೈ ಅವರನ್ನು ಹೋಬಳಿ ಘಟಕದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಹೋಬಳಿ ಘಟಕದ ನಿರ್ದೇಶಕರಾಗಿ ಜಗದೀಶ್ ರೈ, ಕುಷನ್ ರೈ, ರೋಷನ್ ರೈ, ರಮೇಶ್ ರೈ, ಚಂದ್ರಹಾಸ್ ರೈ, ವೇದಾವತಿ ರೈ, ಜಯಂತಿ ರೈ ಆಯ್ಕೆಯಾದರು. ರುಕ್ಮಿಣಿ ರೈ, ಕರಿಯಪ್ಪ ರೈ, ಬಾಲಕೃಷ್ಣ ರೈ, ಸುಬ್ಬಣ್ಣ ರೈ, ಗಂಗಾಧರ ರೈ, ಮಂಜಪ್ಪ ರೈ, ಅರುಣ್ ರೈ ಅವರನ್ನು ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು.
ಘಟಕದ ಅಧ್ಯಕ್ಷ ಚಂದ್ರಶೇಖರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷರು ಜಯಂತಿ ಲವ ರೈ, ಖಜಾಂಚಿ ರವೀಂದ್ರ ರೈ, ಸಹ ಕಾರ್ಯದರ್ಶಿ ಸತೀಶ್ ರೈ ಹಾಜರಿದ್ದರು.
ಜಯಂತಿ ರೈ ಪ್ರಾರ್ಥಿಸಿ, ಕಾರ್ಯದರ್ಶಿ ಅಶ್ವಥ್ ರೈ ಸ್ವಾಗತಿಸಿ, ಮಹಿಳಾ ಕಾರ್ಯದರ್ಶಿ ಹೇಮಾವತಿ ರೈ ವಂದಿಸಿದರು.