ಶ್ರೀಮಂಗಲ, ಅ. 15: ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಪೆÇಮ್ಮಕ್ಕಡ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’ದ ಸಹಕಾರದಲ್ಲಿ ಕಾವೇರಿ ತೀರ್ಥ ವಿತರಣೆ ಹಾಗೂ ತಾ. 18ರಿಂದ 27ರವರೆಗೆ 10 ದಿನಗಳ ವರೆಗೆ ಪ್ರತಿ ದಿನ ಸಂಜೆ ಜನೋತ್ಸವದ ರೀತಿಯಲ್ಲಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳ ಗೊಂಡ ಪತ್ತಲೋದಿ ಕಾರ್ಯಕ್ರಮ ವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. 4ನೇ ವರ್ಷದ ಈ ಪತ್ತಲೋದಿ ಆಚರಣೆಯನ್ನು ಕೋವಿಡ್-19ರ ಹಿನ್ನೆಲೆಯಿಂದ ಕಳೆದ ವರ್ಷಗಳಂತೆ ವಿಜೃಂಭಣೆ ಯಿಂದ ಆಚರಿಸಲು ತೊಡಕುಂಟಾಗಿದೆ. ಆದರೂ ಪ್ರತಿದಿನ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ನಡೆಸಲಾಗುವುದು ಎಂದು ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾವೇರಿ ತೀರ್ಥ ವಿತರಣೆ: ತಾ. 17 ರಂದು ತಲಕಾವೇರಿಯಲ್ಲಿ ಪವಿತ್ರ ತೀರ್ಥರೂಪಿಣಿ ಕಾವೇರಿ ತೀರ್ಥೊದ್ಭವದ ಸಂದರ್ಭ ಹಾಜರಿದ್ದು, ಟಿ.ಶೆಟ್ಟಿಗೇರಿ ಸಾರ್ವಜನಿಕ ಗೌರಿಗಣೇಶ ಸೇವಾಸಮಿತಿಯ ಸದಸ್ಯರು ಸಂಗ್ರಹಿಸಿ ತರುವ ಪವಿತ್ರ ಕಾವೇರಿ ತೀರ್ಥಕ್ಕೆ ತಾ. 18ರಂದು ಪೂರ್ವಾಹ್ನ 9:30 ಗಂಟೆಗೆ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ ಪೂಜೆ ಸಲ್ಲಿಸಿ ‘ಕಣಿ ಪೂಜೆ’ ಮಾಡಿದ ನಂತರ ಭಕ್ತಾದಿಗಳಿಗೆ ವಿತರಿಸಲಾಗುವುದು.
ಪತ್ತಲೋದಿ ಕಾರ್ಯಕ್ರಮ: ತಾ. 18 ರಿಂದ 27ರ ವರೆಗೆ ಪ್ರತಿದಿನ ಸಂಜೆ ಕೊಡವ ಸಮಾಜ ಸಭಾಂಗಣದಲ್ಲಿ ನೆಲ್ಲಕ್ಕಿ ದೀಪ ಹಚ್ಚಿ ಕಾವೇರಿ ತಾಯಿಯನ್ನು ಪ್ರಾರ್ಥಿಸಿ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ನಡೆಸಲಾಗುವುದು. ಈ ಸಂದರ್ಭ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ವತಿಯಿಂದ ತಾ. 18ರಂದು ಕಾವೇರಮ್ಮೆಯ ಕುರಿತ ಕೊಡವ ಹಾಡುಗಾರಿಕೆ ಸ್ಪರ್ಧೆ, 19ರಂದು ಕಾವೇರಮ್ಮೆಯ ಕಥೆ ಹೇಳುವುದು, 20ರಂದು ಕೊಡವ ಭಾಷೆಯಲ್ಲಿ ಕಾವೇರಿ ಚಂಗ್ರಾಂಧಿ ಸಂಬಂಧಿತ ಆಶು ಭಾಷಣ, 21ರಂದು ಕೊಡವ ಜಾನಪದ ಹಾಡುಗಾರಿಕೆ, 22ರಂದು ಕೊಡವ ಪಳಂಜೊಲ್ಲ್ ಸ್ಪರ್ಧೆ, 23ರಂದು ಕೊಡವ ಭಾವಗೀತೆ, 24ರಂದು ಕೊಡವ ಶಬ್ದ ಹೇಳುವ ಸ್ಪರ್ಧೆ, 25ರಂದು ಕೊಡವ ಸಂಪ್ರದಾಯದ ಬಗ್ಗೆ ಚರ್ಚಾ ಸ್ಪರ್ಧೆ, 26 ರಂದು ಕೊಡವ ಅಂತ್ಯಾಕ್ಷರಿ ಹಾಡು ಪೈಪೆÇೀಟಿ, 27 ರಂದು ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಪ್ರತಿ ದಿನ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಅಭಿನಂದನಾ ಪತ್ರ ವಿತರಣೆ ಮಾಡಲಾಗುವುದು. ಸ್ಪರ್ಧೆಯಲ್ಲಿ ಹಿರಿಯ, ಕಿರಿಯರೆಂಬ ಎರಡು ಪ್ರತ್ಯೇಕ ವಿಭಾಗವಿದ್ದು, ವಿಭಾಗವಾರು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಕೋವಿಡ್-19ರ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದನ್ನು ಖಡ್ಡಾಯಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ರಮೇಶ್, ಕ್ರೀಡೆ ಹಾಗೂ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಭಾಗವಹಿಸಿದರು.