ಗೋಣಿಕೊಪ್ಪ ವರದಿ, ಅ. 15: ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ ತಿಂಗಳ ಪಿಂಚಣಿಯ ಫಲಾನುಭವಿಗಳಿಗೆ ಚಾಲನಾ ಪತ್ರವನ್ನು ಶಾಸಕ ಕೆ.ಜಿ. ಬೋಪಯ್ಯ ಪೊನ್ನಂಪೇಟೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಹಸ್ತಾಂತರ ಮಾಡಿದರು.
ಪಿಂಚಣಿ ಪಡೆಯಲಿರುವ ಗೋಣಿಕೊಪ್ಪ, ಹಾತೂರು, ಕೈಕೇರಿ, ಅರ್ವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 12 ಫಲಾನುಭವಿಗಳು ಚಾಲನಾ ಪತ್ರ ಸ್ವೀಕರಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ಕುಮಾರ್, ಬಗರ್ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪ್ರಮುಖರಾದ ಯಮುನಾ ಚಂಗಪ್ಪ, ಲಾಲಾ ಭೀಮಯ್ಯ, ಕುಲ್ಲಚಂಡ ಚಿಣ್ಣಪ್ಪ, ಮುದ್ದಿಯಡ ಮಂಜು, ನೂರೇರ ಮನೋಜ್ ಉಪಸ್ಥಿತರಿದ್ದರು.