ಮಡಿಕೇರಿ, ಅ. 15: ಕಳೆದ 24 ಗಂಟೆಗಳಲ್ಲಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ 8.03 ಇಂಚು ಮಳೆಯೊಂದಿಗೆ ಭಾಗಮಂಡಲ ಸರಹದ್ದಿನಲ್ಲಿ 3.89 ಇಂಚು ದಾಖಲಾಗಿದೆ. ಈ ವ್ಯಾಪ್ತಿಯಲ್ಲಿ ಚಳಿಗಾಳಿಯೊಂದಿಗೆ ದಟ್ಟ ಮೋಡದ ವಾತಾವರಣ ಮುಂದುವರಿದಿದೆ. ಭಾಗಮಂಡಲ ಸುತ್ತಮುತ್ತ 2018ರಲ್ಲಿ ಈ ಅವಧಿಗೆ 279 ಇಂಚು, 2019ರಲ್ಲಿ 220.6 ಇಂಚು ಹಾಗೂ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ 230 ಇಂಚು ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 1.37 ಇಂಚು ಮಳೆಯಾದರೆ, ವರ್ಷಾರಂಭದಿಂದ ಈತನಕ ಸರಾಸರಿ 96.71 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಗೆ 102.98 ಇಂಚು ದಾಖಲಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 1.13 ಇಂಚು ಹಾಗೂ ಜಿಲ್ಲಾ ಕೇಂದ್ರ ಮಡಿಕೇರಿಗೆ 2.18 ಇಂಚು ಸರಾಸರಿ ಮಳೆ ಆಗಿದೆ. ಕಳೆದ ವರ್ಷ ಈ ಅವಧಿಗೆ ಮಡಿಕೇರಿ ತಾಲೂಕಿನಲ್ಲಿ 140.48 ಇಂಚು ಮಳೆಯಾದರೆ, ಪ್ರಸಕ್ತ ಅವಧಿಗೆ 137.38 ಇಂಚು ದಾಖಲಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ ಹಿಂದಿನ 24 ಗಂಟೆಗಳಲ್ಲಿ 1.13 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 97.11 ಇಂಚು ಹಾಗೂ ಪ್ರಸಕ್ತ 87.03 ಇಂಚು ಸರಾಸರಿ ಮಳೆ ದಾಖಲಾಗಿದೆ.

ವೀರಾಜಪೇಟೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಅಧಿಕ ಮಳೆಯೊಂದಿಗೆ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋರಾ ಸುತ್ತಮುತ್ತ 4.20 ಇಂಚು ಮಳೆಯಾಗಿದೆ. ಈ ವ್ಯಾಪ್ತಿಗೆ 2019ರಲ್ಲಿ 254.4 ಇಂಚು ಮಳೆ ಈ ಅವಧಿಗೆ ದಾಖಲಾಗಿತ್ತು. ಪ್ರಸಕ್ತ ವರ್ಷದಲ್ಲಿ 214.33 ಇಂಚು ಮಳೆ ಬಿದ್ದಿದೆ.

ಸೋಮವಾರಪೇಟೆ ತಾಲೂಕಿನಲ್ಲಿ 1.04 ಇಂಚು ಮಳೆಯಾಗಿದೆ. ಈತನಕ ಒಟ್ಟು 65.73 ಇಂಚು ಹಾಗೂ ಕಳೆದ ವರ್ಷ ಇದೇ ಅವಧಿಗೆ 72.10 ಇಂಚು ಮಳೆಯಾಗಿತ್ತು.

ಹೋಬಳಿವಾರು ಮಳೆ: ಜಿಲ್ಲೆಯ ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 2.08 ಇಂಚು, ವೀರಾಜಪೇಟೆ 1.88 ಇಂಚು, ಹುದಿಕೇರಿ 1.14 ಇಂಚು, ಶ್ರೀಮಂಗಲ 1.42 ಇಂಚು, ಪೊನ್ನಂಪೇಟೆ ಸುತ್ತಮುತ್ತ 0.71 ಇಂಚು, ಅಮ್ಮತ್ತಿ 1.12 ಇಂಚು, ಬಾಳೆಲೆ 0.51 ಇಂಚು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಸುತ್ತಮುತ್ತ 2.20 ಇಂಚು, ಕೊಡ್ಲಿಪೇಟೆ 1.88 ಇಂಚು, ಸೋಮವಾರಪೇಟೆ 0.51 ಇಂಚು, ಶನಿವಾರಸಂತೆ 0.63 ಇಂಚು, ಕುಶಾಲನಗರ 0.59 ಇಂಚು, ಸುಂಟಿಕೊಪ್ಪ 0.59 ಹಾಗೂ ಹಾರಂಗಿ ವ್ಯಾಪ್ತಿಯಲ್ಲಿ 0.28 ಇಂಚು ಮಳೆ ದಾಖಲಾಗಿದೆ.