ಮಡಿಕೇರಿ, ಅ. 15: ಅಕ್ರಮವಾಗಿ ಕಾಫಿತೋಟವೊಂದರಲ್ಲಿ ಕಡಿದು ಸಾಗಾಟಕ್ಕೆ ಮುಂದಾಗಿದ್ದ ರೂ. 4.50 ಲಕ್ಷ ಮೌಲ್ಯದ ಬೀಟಿ ಮರವನ್ನು ಕುಟ್ಟ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಅಲ್ಲಿನ ಕೆ. ಬಾಡಗ ಗ್ರಾಮದ ಬೊಳ್ಳರಿಗೇಟ್ನ ಗೌರಿ ಅಪ್ಪಯ್ಯ ಎಂಬವರು ಬೆಂಗಳೂರಿನಲ್ಲಿ ವಾಸವಾಗಿದ್ದು, ಇವರ ತೋಟವನ್ನು ಚಂಗಪ್ಪ (ದೀಪಕ್) ಎಂಬವರು ನಿರ್ವಹಣೆ ಮಾಡುತ್ತಿದ್ದಾರೆ. ಈ ತೋಟದಲ್ಲಿ ಮರ ಕಡಿದಿರುವದು ಪತ್ತೆಯಾಗಿದೆ. ಪ್ರಕರಣದ ಬಗ್ಗೆ ಚಂಗಪ್ಪ ಸೇರಿದಂತೆ ಅಶ್ರಫ್ ಹಾಗೂ ಇತರರ ಮೇಲೆ ಮೊಕದ್ದಮೆ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಡಿವೈಎಸ್ಪಿ ಜಯಕುಮಾರ್, ಸಿ.ಐ. ಕ್ಯಾತೆಗೌಡ ಮಾರ್ಗದರ್ಶನದಲ್ಲಿ ಕುಟ್ಟ ಎಸ್ಐ ಹೆಚ್.ಜೆ. ಚಂದ್ರಪ್ಪ, ಎಎಸ್ಐ ಫ್ರಾನ್ಸಿಸ್, ಸಿಬ್ಬಂದಿಗಳಾದ ರಂಜಿತ್, ವಿಶ್ವನಾಥ್, ಪ್ರಭಾಕರ್ ಕಾರ್ಯಾಚರಣೆ ನಡೆಸಿದ್ದಾರೆ.