ಮಡಿಕೇರಿ, ಅ. 15: ಜಿಲ್ಲೆಯಲ್ಲಿ ಹೊಸದಾಗಿ 121 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 4095 ಪ್ರಕರಣಗಳು ವರದಿಯಾಗಿದ್ದು, 3459 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 59 ಮಂದಿ ಸಾವನ್ನಪ್ಪಿದ್ದು 577 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 113 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 54 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 410 ಮಂದಿ ಹೋಮ್ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 598 ನಿಯಂತ್ರಿತ ವಲಯಗಳಿವೆ.