ಮಡಿಕೇರಿ, ಅ. 15: ಕಸ್ತೂರಿ ರಂಗನ್ ವರದಿ ಯನ್ನು ಯಥಾವತ್ ಜಾರಿಗೊಳಿಸ ಬಾರದೆಂದು ಕೋರಿ ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆದಿರುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ವರದಿ ಜಾರಿಗೆ ಸಂಬಂಧಿಸಿ ಡಿಸೆಂಬರ್ 31 ರೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರ ಣವು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸೂಚನೆ ನೀಡಿರುವ ಹಿನ್ನೆಲೆ ಸಿಎಂ ಈ ನಿರ್ಧಾರ ಪ್ರಕಟಿಸಿದ್ದಾರೆ.
ಮಲೆನಾಡು ಭಾಗದ ಶಾಸಕ ಅರಗ ಜ್ಞಾನೇಂದ್ರ ಮತ್ತು ಹೆಚ್. ಹಾಲಪ್ಪ ತಮ್ಮನ್ನು ಭೇಟಿಯಾಗಿ ಕಸ್ತೂರಿ ರಂಗನ್ ವರದಿಯಿಂದ ಜನರ ಮೇಲಾಗುವ ಪರಿಣಾಮಗಳ ಕುರಿತು ಚರ್ಚಿಸಿದ ಸಂದರ್ಭ ಸಿಎಂ ಯಡಿಯೂರಪ್ಪ ಈ ಭರವಸೆ ನೀಡಿದ್ದು, ಯಥಾವ ತ್ತಾಗಿ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ವರದಿ ಜಾರಿಗೆ ಬಂದಲ್ಲಿ ಮಲೆನಾಡಿಗರ ಜೀವನಕ್ಕೆ ತೊಂದರೆ ಆಗಲಿದೆ. ನೂರಾರು ಹಳ್ಳಿಗಳಲ್ಲಿರುವ ರಸ್ತೆ, ಶಾಲೆ, ಆಸ್ಪತ್ರೆ ಇತ್ಯಾದಿ ಮೂಲ ಸೌಕರ್ಯ ಅರಣ್ಯದ ಭಾಗವಾಗಲಿದೆ.
ಇದನ್ನು ಅರಿಯದೆ ಎನ್ಜಿಟಿ ಆದೇಶ ಪಾಲಿಸುವ ನೆಪದಲ್ಲಿ ಜನರನ್ನು ಒಕ್ಕಲೆಬ್ಬಿಸುವ ಆತಂಕ ಇರುವುದರಿಂದ ಸರಕಾರ ಮಧ್ಯಪ್ರವೇಶ ಮಾಡಬೇಕು ಎಂದು ಶಾಸಕದ್ವಯರು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದರು.