ಕೊಡ್ಲಿಪೇಟೆ, ಅ. 15: ಕೊಡ್ಲಿಪೇಟೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಕೋವಿಡ್-19 ವ್ಯಾಪಕವಾಗುತ್ತಿರುವ ಹಿನ್ನೆಲೆ ಪ್ರತಿದಿನ ಅರ್ಧ ದಿನ ಮಾತ್ರ ವ್ಯಾಪಾರ-ವಹಿವಾಟು ನಡೆಸಲು ವಾಣಿಜ್ಯೋದ್ಯಮಿಗಳ ಸಂಘದ ಸ್ಥಾನೀಯ ಸಮಿತಿ ನಿರ್ಧರಿಸಿದೆ.

ಪಟ್ಟಣದಲ್ಲಿ ನಡೆದ ವರ್ತಕರ ಹಾಗೂ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ತಾ. 15 ರಿಂದ ತಾ. 22 ರವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಮಾತ್ರ ವ್ಯಾಪಾರ-ವಹಿವಾಟು ನಡೆಸಿ ನಂತರ ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟು, ಹೊಟೇಲ್ ಬಂದ್ ಮಾಡುವುದು. ಸಂತೆ ದಿನವಾದ ಭಾನುವಾರ ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಗಿದೆ.

ಈ ವಿಚಾರವನ್ನು ಧ್ವನಿವರ್ಧಕದ ಮೂಲಕ ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಲಾಯಿತು ಎಂದು ವಾಣಿಜ್ಯೋದ್ಯಮಿಗಳ ಸಂಘದ ಸ್ಥಾನೀಯ ಸಮಿತಿ ಅಧ್ಯಕ್ಷ ಹೆಚ್.ಸಿ. ಯತೀಶ್‍ಕುಮಾರ್ ತಿಳಿಸಿದ್ದಾರೆ.