*ಗೋಣಿಕೊಪ್ಪಲು, ಅ. 15: ಆರ್.ಐ. ಜಿಲ್ಲೆ 3181ಕ್ಕೆ ಸೇರಿರುವ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ ಜಿಲ್ಲೆಗಳ ರೋಟರಿ ರಾಜ್ಯಪಾಲ ರಂಗನಾಥ ಭಟ್ ತಾ. 11 ರಂದು ಗೋಣಿಕೊಪ್ಪಲು ಹಾಗೂ ಪೆÇನ್ನಂಪೇಟೆಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಪೆÇನ್ನಂಪೇಟೆಯಲ್ಲಿ ಮೊದಲಿಗೆ ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಳೇ ನ್ಯಾಯಾಲಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ರಂಗನಾಥ್ ಭಟ್ ಪಾಲ್ಗೊಂಡರು. ಅಲ್ಲಿನ ಗ್ರಾ.ಪಂ. ಸಭಾಂಗಣದಲ್ಲಿ ಜರುಗಿದ 7 ಮಹಿಳೆಯರ ಸೀಮಂತ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡು ಶುಭ ಹಾರೈಸಿದರು. ಗೋಣಿಕೊಪ್ಪಲಿನ ರೋಟರಿ ಅಧ್ಯಕ್ಷೆ ಎಂ.ಎಲ್. ಬೀಟಾ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರೋಟರಿ ಮಹಿಳೆಯರು ಬಳೆ ತೊಡಿಸಿ, ಸೀರೆ, ರವಿಕೆ ಉಡುಗೊರೆಯೊಂದಿಗೆ ಹೂವು, ಹಣ್ಣು, ತಾಂಬೂಲ ನೀಡಿ ಸೀಮಂತ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಿದರು. ಇದೇ ಸಂದರ್ಭ ಮೂವರು ಆರೋಗ್ಯ ಕಾರ್ಯಕರ್ತೆ ಯರಿಗೆ ಉಡುಗೊರೆ ನೀಡಲಾಯಿತು.
ಕೊಡವ ಸಮಾಜ ಸಮೀಪ ಇರುವ ವೃದ್ಧಾಶ್ರಮಕ್ಕೆ ಭೇಟಿ ನೀಡುವ ಮೂಲಕ ರೋಟರಿ ಸಂಸ್ಥೆಯಿಂದ ಅಧ್ಯಕ್ಷ ಪಟ್ಟಮಾಡ ಗಣಪತಿ ಅವರಿಗೆ ರೂ. 5 ಸಾವಿರ ನೆರವು ಚೆಕ್ ನೀಡಿದರು. ಈ ಸಂದರ್ಭ ವಿದ್ಯುತ್ ಸಮಸ್ಯೆ ನೀಗಲು ಆಶ್ರಮಕ್ಕೆ ರೋಟರಿ ರಾಜ್ಯಪಾಲ ರಂಗನಾಥ ಭಟ್ ಅವರು ವೈಯಕ್ತಿಕವಾಗಿ ರೂ. 10 ಸಾವಿರ ನೆರವು ನೀಡಿದರು. ರಾಮಕೃಷ್ಣ ಶಾರದಾಶ್ರಮಕ್ಕೆ ಭೇಟಿ ನೀಡಿದ ನಂತರ ಗೋಣಿಕೊಪ್ಪಲು ಸಮೀಪ ಕೈಕೇರಿ ಯಲ್ಲಿರುವ ರೋಟರಿ ಸಭಾಂಗಣದಲ್ಲಿ ಸಂಸ್ಥೆಯ ಸದಸ್ಯರ ನಡುವೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜಲ, ಪರಿಸರ ಸಂರಕ್ಷಣೆ ಗುರಿ
ಸಂಜೆ ಗೋಣಿಕೊಪ್ಪಲು ಸ್ಪೈಸ್ ರಾಕ್ ಕುಕೂನ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಕೊಡಗು ಒಳಗೊಂಡಂತೆ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ 82 ರೋಟರಿ ಕ್ಲಬ್‍ಗಳಿದ್ದು ಒಟ್ಟು 3500 ಸದಸ್ಯರಿದ್ದಾರೆ. ಪ್ರಸ್ತುತ ವರ್ಷದಲ್ಲಿ ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ, ಶಾಲಾ ಆವರಣ ಹಾಗೂ ಶೌಚಾಲಯ ಸ್ವಚ್ಛತೆ, ತಾಯಿ ಮತ್ತು ಮಗುವಿನ ಹಾರೈಕೆ, ಶಿಕ್ಷಣಕ್ಕೆ ಒತ್ತು ನೀಡುವದು ಹಾಗೂ ದುರ್ಬಲ ವರ್ಗದವರಿಗೆ ಉಚಿತ ವೈದ್ಯಕೀಯ ನೆರವು, ಔಷಧಿ ನೀಡುವ ಗುರಿ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ವಲಯ 6 ರ ಸಹಾಯಕ ರಾಜ್ಯಪಾಲ ಬಿ.ಬಿ. ಮಾದಪ್ಪ, ವಲಯ ಲೆಫ್ಟಿನೆಂಟ್ ದಿಲನ್ ಚಂಗಪ್ಪ, ವಲಯ ಕಾರ್ಯದರ್ಶಿ ವಿಕ್ರಂ ದತ್ತ,ನಿಯೋಜಿತ ರೋಟರಿ ಅಧ್ಯಕ್ಷೆ ನೀತಾ ಕಾವೇರಮ್ಮ ಉಪಸ್ಥಿತರಿದ್ದರು. ಅಧ್ಯಕ್ಷೆ ಬೀಟಾ ಎಂ.ಎಲ್. ಸ್ವಾಗತ, ಕಾರ್ಯದರ್ಶಿ ಮುತ್ತಪ್ಪ ಕೆ.ಸಿ. ವರದಿ ಓದಿದರು.
ರಾಷ್ಟ್ರೀಯ ನಿರ್ಮಾಣ ಪ್ರಶಸ್ತಿ
ಗೋಣಿಕೊಪ್ಪಲು ರೋಟರಿ ಸಂಸ್ಥೆ ವತಿಯಿಂದ ವೀರಾಜಪೇಟೆ ತಾಲೂಕಿನ ಸಾಧಕರನ್ನು ಗುರುತಿಸಿ ರಾಷ್ಟ್ರೀಯ ನಿರ್ಮಾಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕರ ವಿಭಾಗ ದಲ್ಲಿ ವೀರಾಜಪೇಟೆಯ ಚಂಗಪ್ಪ ಎಂ.ಯು., ಸತ್ಯ ಎಂ.ಟಿ. ಹಾಗೂ ಜಯಂತಿ ಎ.ಎ., ಜಿಲ್ಲಾ ಐಸಿಎಸ್‍ಸಿ ಟಾಪರ್ ಗೋಣಿಕೊಪ್ಪ ಲಿನ ದಂತ ವೈದ್ಯ ಡಾ. ಆಶಿಕ್ ಚಂಗಪ್ಪ ಪುತ್ರ ರಯಾನ್ ಸೋಮಯ್ಯ (ಶೇ.99), ಕ್ರೀಡೆಯಲ್ಲಿ ಕಾಪ್ಸ್‍ನ ಬ್ಯಾಡ್‍ಮಿಂಟನ್ ಪ್ರತಿಭೆ ದಿಯಾ ಭೀಮಯ್ಯ ಹಾಗೂ ವಿಶ್ವ ಅಂಚೆ ದಿನ ಅಂಗವಾಗಿ ಪೆÇನ್ನಂಪೇಟೆಯ ಅಂಚೆ ನೌಕರ ಸುನಂದ ವಿ.ಎಸ್. ಅವರನ್ನು ಸನ್ಮಾನಿಸಲಾಯಿತು.