ಕೂಡಿಗೆ, ಅ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಮೂಲಕ ಹರಿಯುವ ಹಾರಂಗಿ ಮುಖ್ಯ ನಾಲೆ ನೂತನ ಸೇತುವೆಯನ್ನು ನಿರ್ಮಿಸಲು ಮತ್ತು ಕಾಂಕ್ರೀಟ್ ರಸ್ತೆಯ ಕಾಮಗಾರಿಗಳು ನಡೆಸಲು ನೀರಾವರಿ ಇಲಾಖೆಯ ಮೂಲಕ ರಾಜ್ಯಸರ್ಕಾರಕ್ಕೆ ಈ ಕಾಮಗಾರಿಗಳನ್ನು ನಡೆಸಲು ಈಗಾಗಲೇ ಹತ್ತು ಕೋಟಿಗೂ ಹೆಚ್ಚು ವೆಚ್ಚದ ಕ್ರಿಯಾ ಯೋಜನೆಯು ತಯಾರಾಗಿದ್ದು ಕಾಮಗಾರಿಯನ್ನು ನಡೆಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಮದಲಾಪುರ ಗ್ರಾಮದ ಮೂಲಕ ಬ್ಯಾಡಗೊಟ್ಟ ಗ್ರಾಮದ ಮೂಲಕ ಸೋಮವಾರಪೇಟೆ ತಾಲೂಕಿನ ಕೇಂದ್ರಕ್ಕೆ ಹೋಗಲು ಹತ್ತಿರದ ದಾರಿಯಾಗಿದೆ. ಈ ಮಾರ್ಗದಲ್ಲಿ ಹೋಗಲು ಕಳೆದ 54 ವರ್ಷಗಳ ಹಿಂದೆ ಮುಖ್ಯ ನಾಲೆಗೆ ಅಳವಡಿಸಿದ ಸೇತುವೆಯು ತೀರಾ ಹಾಳಾಗಿದ್ದು, ಈ ಮಾರ್ಗವಾಗಿ 12 ಗ್ರಾಮಗಳಿಗೆ ತೆರಳಲು ಮುಖ್ಯ ದಾರಿಯಾಗಿರುತ್ತದೆ. ಈ ಸೇತುವೆಯು ಹಾಳಾಗಿದ್ದು ಅಲ್ಲದೆ ಅದರ ತಡೆಗೋಡೆ ಹಾಳಾಗಿದ್ದು ಅನೇಕ ಅನಾಹುತಗಳು ಸಂಭವಿಸಿವೆ.
ಈ ಸೇತುವೆಯ ದುರಸ್ತಿಗೆ ಸಾರ್ವಜನಿಕರ ಅಗ್ರಹವಾಗಿತು. ಅದರಂತೆ ಕಾವೇರಿ ನೀರಾವರಿ ನಿಗಮ, ರಾಜ್ಯ ನೀರಾವರಿ ಇಲಾಖೆಗೆ ನೂತನ ಸೇತುವೆಯ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ನೂತನ ಸೇತುವೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ತಿಳಿಸಿದ್ದಾರೆ.