ಮಡಿಕೇರಿ. ಅ, 15: ನಾಡಹಬ್ಬ ದಸರಾ ಪ್ರಯುಕ್ತ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ತಾ. 16 ರಿಂದ 10 ದಿನಗಳ ಕಾಲ ಸರಳವಾಗಿ ಜಾನಪದ ದಸರಾ ಆಯೋಜಿಸಲಾಗಿದೆ ಎಂದು ಪರಿಷತ್ ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಮಡಿಕೇರಿಯ ಗಾಂಧಿ ಮೈದಾನ ಬಳಿಯ ಕಾಫಿ ಕೃಪಾ ಕಟ್ಟಡದಲ್ಲಿನ ಸ್ಪ್ಯಾರೋ ಕಾಫಿ ಮಳಿಗೆಯಲ್ಲಿ ಅದರ ಮಾಲೀಕ ಪೆÇನ್ನಚ್ಚನ ಮಧು ಹಲವಾರು ತಿಂಗಳಿನಿಂದ ಕೊಡಗಿ ನಾದ್ಯಂತ ಸಂಚರಿಸಿ ಸಂಗ್ರಹಿಸಿದ ಅಪರೂಪದ ಜಾನಪದ ಪರಿಕರಗಳ ಪ್ರದರ್ಶನ ತಾ.16 ರಿಂದ ತಾ. 26 ರವರೆಗೆ ನಡೆಯಲಿದೆ.
ತಾ.16 ರಂದು (ಇಂದು) ಬೆಳಗ್ಗೆ 10 ಗಂಟೆಗೆ ಕೊಡಗು ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ, ಪೆÇನ್ನಚ್ಚನ ಮಧು ಪಾಲ್ಗೊಳ್ಳಲಿದ್ದಾರೆ.
ಪ್ರದರ್ಶನ ವೀಕ್ಷಿಸಲು ಬರುವವರಿಗೆ ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಧಾರಣೆ ಕಡ್ಡಾಯಗೊಳಿಸಿ, ಸಾಮಾಜಿಕ ಅಂತರವನ್ನೂ ಪಾಲಿಸಲಾಗುತ್ತದೆ ಎಂದು ಅನಿಲ್ ಮಾಹಿತಿ ನೀಡಿದ್ದಾರೆ.