ಕುಶಾಲನಗರ, ಅ. 16: ಕುಶಾಲನಗರ - ಮಡಿಕೇರಿ ಹೆದ್ದಾರಿ ರಸ್ತೆಯ ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿ ಯಲ್ಲಿ ಅರಣ್ಯ ಇಲಾಖೆ ವತಿಯಿಂದ ವಾಹನ ಸವಾರರಿಗೆ ಎಚ್ಚರಿಕೆ ಫಲಕ ಅಳವಡಿಸಲಾಯಿತು. ಬಸವನಹಳ್ಳಿ ಯಿಂದ ಹೊಸಕೋಟೆ ತನಕ ಅಂದಾಜು 20 ಕ್ಕೂ ಅಧಿಕ ಫಲಕಗಳನ್ನು ಅಳವಡಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಯಾವುದೇ ವಾಹನ ಗಳನ್ನು ನಿಲುಗಡೆ ಗೊಳಿಸದಂತೆ ಎಚ್ಚರಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಪ್ರವಾಸಿ ವಾಹನಗಳು ನಿಲುಗಡೆಗೊಂಡು ಭಾರೀ ಪ್ರಮಾಣದ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಹಾಕುತ್ತಿರುವುದು ಹಾಗೂ ಕಾಡಾನೆ ಸೇರಿದಂತೆ ವನ್ಯಜೀವಿಗಳ ಓಡಾಟ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಗೊಳಿಸದಂತೆ ಎಚ್ಚರಿಸಲಾಗಿದೆ. ಅತ್ತೂರು ವಲಯದ ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ ನೇತೃತ್ವದಲ್ಲಿ ಆರ್ಆರ್ಟಿ ತಂಡದ ಸದಸ್ಯರು ಎಚ್ಚರಿಕೆ ಫಲಕವನ್ನು ಅಳ ವಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.