ಮಡಿಕೇರಿ, ಅ. 16: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಕಲ್ಲಳ್ಳ ಮಾಲೂರು ಅರಣ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗೆ ರಾಜ್ಯ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನಿಟ್ಟೂರು ಗ್ರಾಮದ ಸಂತೋಷ್ ಎಂಬಾತ ಈ ಪ್ರಕರಣದ ಒಂದನೇ ಆರೋಪಿಯಾಗಿದ್ದು, ಈತನಿಗೆ ರೂ. 1 ಲಕ್ಷ ಬಾಂಡ್‍ನೊಂದಿಗೆ ನ್ಯಾಯಾಧೀಶರಾದ ಶ್ರೀನಿವಾಸ್ ಹರೀಶ್‍ಕುಮಾರ್ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಹೈಕೋರ್ಟ್ ವಕೀಲ ಆರ್.ಕೆ. ಮಹದೇವ್ ವಕಾಲತ್ತು ವಹಿಸಿದ್ದರು.