ವಿರಾಜಪೇಟೆ ವರದಿ, ಡಿ. 14: ಇಲ್ಲಿನ ಲಯನ್ಸ್ ಕ್ಲಬ್ನಿಂದ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿ ಶ್ರೀ ಕಾವೇರಿ ಮಾತೆಯ ಪ್ರತಿಮೆಯನ್ನು ಲಯನ್ ಜಿಲ್ಲೆಯ ರಾಜ್ಯಪಾಲರಾದ ಡಾ. ಗೀತಾ ಪ್ರಕಾಶ್ ಪ್ರತಿಮೆಯ ದಾನಿ ಬಿ.ಎಂ. ಭಾರತಿ ಜಂಟಿಯಾಗಿ ಅನಾವರಣಗೊಳಿಸಿದರು.
ಮುಖ್ಯ ಅತಿಥಿಯಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ಡಾ. ವಿಶ್ವನಾಥ್ ಸಿಂಪಿ ಮಾತನಾಡಿದರು.
ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಪಿ. ಪ್ರಸನ್ನ ಕಾರ್ಯದÀರ್ಶಿ ಬಿ.ಎಸ್. ಪುಷ್ಪರಾಜ್, ಕೋಶಾಧಿಕಾರಿ ಅಮ್ಮಣಿಚಂಡ ಪ್ರವೀಣ್, ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಡಾ. ಗಾಯತ್ರಿ ಗೀತಾ ಪ್ರಕಾಶ್ ಮತ್ತು ವೀರಾಜಪೇಟೆ ಲಯನ್ಸ್ ಕ್ಲಬ್ ಸದಸ್ಯರು ಪ್ರತಿಮೆ ದಾನಿಗಳು ಹಾಜರಿದ್ದರು.