ಮಡಿಕೇರಿ, ಡಿ. 14: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 74 ಕ್ಕೇರಿದೆ. ಮಡಿಕೇರಿಯ 91 ವರ್ಷದ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ. 14 ರಂದು ಹೊಸದಾಗಿ 23 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 1,00,225 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 5,523 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 5,341 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 74 ಮಂದಿ ಸಾವನ್ನಪ್ಪಿದ್ದು 108 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 16 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 92 ಮಂದಿ ಹೋಮ್ ಐಸೋಲೇಷನ್ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 59 ನಿಯಂತ್ರಿತ ವಲಯಗಳಿವೆ.