ಮಡಿಕೇರಿ, ಡಿ. 15: ಆ್ಯಂಬ್ಯುಲೆನ್ಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಸಮೀಪದ ನೀರುಕೊಲ್ಲಿಯಲ್ಲಿ ನಡೆದಿದೆ.
ಪಾಲಿಬೆಟ್ಟ ಆರೋಗ್ಯ ಕೇಂದ್ರದಿಂದ ತುರ್ತು ಚಿಕಿತ್ಸೆಗೆ ರೋಗಿಯನ್ನು ಕರೆದುಕೊಂಡು ಮಡಿಕೇರಿಗೆ ಕಡೆ ಬರುತ್ತಿದ್ದ ಆ್ಯಂಬ್ಯುಲೆನ್ಸ್ ಹಾಗೂ ಮಡಿಕೇರಿಯಿಂದ ಸಿದ್ದಾಪುರ ಮಾರ್ಗವಾಗಿ ತೆರಳುತ್ತಿದ್ದ ಕಾರು ನಡುವೆ ಡಿಕ್ಕಿಯಾಗಿದೆ. ಪರಿಣಾಮ ಕಾರು ಚಾಲಕ ದೀಪಕ್ ರೈ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.