ಶನಿವಾರಸಂತೆ: ಶನಿವಾರಸಂತೆ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು ಬೀಟ್ ಸಭೆ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಪೊಲೀಸ್ ಉಪ ಠಾಣೆಯ ಸಹಾಯಕ ಠಾಣಾಧಿಕಾರಿ ಕೃಷ್ಣೇಗೌಡ ಬೀಟ್ ಸಿಬ್ಬಂದಿಗಳಾದ ಪ್ರವೀಣ್, ಶನಿವಾರಸಂತೆ ಠಾಣೆಯ ಸಫೀರ್, ರವಿಚಂದ್ರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.*ಗೋಣಿಕೊಪ್ಪಲು: ಗೋಣಿಕೊಪ್ಪಲು ಪೆÇಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಾಗೃತಿ ಅಭಿಯಾನ ನಡೆಸಲಾಯಿತು.
ಠಾಣಾಧಿಕಾರಿ ಸುಬ್ಬಯ್ಯ ಹಾಗೂ ಸಿಬ್ಬಂದಿಗಳು ಬಸ್ ನಿಲ್ದಾಣ, ಆಟೋ ನಿಲ್ದಾಣಗಳಲ್ಲಿ ಅಪರಾಧ ತಡೆ ಮಾಸಾಚರಣೆ ಜಾಗೃತಿ ಮೂಡಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಆಟೋ ಚಾಲಕರು, ವಾಹನ ಚಾಲಕರು ಹಾಗೂ ಸಾರ್ವಜನಿಕರಿಗೆ ಅಪರಾಧ ತಡೆ ಮಾಸಾಚರಣೆಯ ಬಗ್ಗೆ ವಿವರಿಸಿದರು. ನಾಗರಿಕರ ದಿಕ್ಕು ತಪ್ಪಿಸಿ ಕಳ್ಳತನ ಮಾಡುವವರ ಬಗ್ಗೆ ಎಚ್ಚರದಿಂದ ಇರುವಂತೆ ಸಲಹೆ ನೀಡಿದರು.
ಮನೆಯಲ್ಲಿ ಇಲ್ಲದಿರುವ ಸುಳಿವು ಸಿಗದಂತೆ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಮನೆಯ ಮುಂದೆ ಪತ್ರಿಕೆಗಳನ್ನು ಹಾಗೂ ಹಾಲಿನ ಪ್ಯಾಕೇಟ್ಗಳು ಇರದಂತೆ ಸಂಬಂಧಿಸಿದವರಿಗೆ ಮೊದಲೇ ತಿಳಿಸಬೇಕು ಎಂದು ಹೇಳಿದರು. ಜನ ಸಂದಣಿ ಇರುವಂತಹ ಸಂದರ್ಭ ಜೇಬುಗಳ್ಳರ ಬಗ್ಗೆ ಎಚ್ಚರದಿಂದ ಇರುವಂತೆ ಸೇರಿದಂತೆ ಹಲವಾರು ಸಲಹೆಗಳನ್ನು ನೀಡಿದರು. ತಮ್ಮ ಮೊಬೈಲ್ನಲ್ಲಿ ಸ್ಥಳೀಯ ಠಾಣೆಯ ದೂರವಾಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆದಂತಹ ಸಂದರ್ಭ ತಕ್ಷಣ ಮಾಹಿತಿ ನೀಡಲು ಪ್ರತಿಯೊಬ್ಬರು ಮುಂದಾಗಬೇಕು, ಇದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂಬುವುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭ ಸಹಾಯಕ ಠಾಣಾಧಿಕಾರಿ ನಾಣಯ್ಯ, ಸಿಬ್ಬಂದಿಗಳಾದ ಮಣಿಕಂಠ, ಸುನೀಲ್, ಚಾಲಕ ಕೃಷ್ಣಪ್ಪ ಹಾಜರಿದ್ದರು.